ಉಪ ರಾಷ್ಟ್ರಪತಿಯಾಗಿ ಧಂಕರ್ ಪ್ರಮಾಣ ವಚನ

170

ಪ್ರಜಾಸ್ತ್ರ ಸುದ್ದಿ

ನವದೆಹಲಿ: ದೇಶದ 14ನೇ ಉಪ ರಾಷ್ಟ್ರಪತಿಯಾಗಿ ಜಗದೀಪ್ ಧಂಕರ್ ಗುರುವಾರ ಪ್ರಮಾಣ ವಚನ ಸ್ವೀಕರಿಸಿದರು. ನೂತನ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಪ್ರಮಾಣ ವಚನ ಬೋಧಿಸಿದರು.

ಬಂಗಾಳ ಮಾಜಿ ರಾಜ್ಯಪಾಲ ಧಂಕರ್, ಕಳೆದ ವಾರ ನಡೆದ ಚುನಾವಣೆಯಲ್ಲಿ ಮಾರ್ಗೆರೆಟ್ ಆಳ್ವಾ ಅವರನ್ನು 346 ಮತಗಳಿಂದ ಸೋಲಿಸಿದರು. ವೆಂಕಯ್ಯ ನಾಯ್ಡು ಅವರ ಸ್ಥಾನವನ್ನು ಧಂಕರ್ ಅಲಂಕರಿಸಿದರು. ಇನ್ನು ರಾಜ್ಯಸಭಾ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಲಿದ್ದಾರೆ.




Leave a Reply

Your email address will not be published. Required fields are marked *

error: Content is protected !!