ಸುದೀರ್ಘ ವಾದದ ಬಳಿಕವೂ ‘ಡಿಕೆಶಿ’ಗಿಲ್ಲ ಜಾಮೀನು

370

ನವದೆಹಲಿ: ಅಕ್ರಮ ಹಣ ವರ್ಗಾವಣೆ ಪ್ರಕರಣ ಸಂಬಂಧ ಇಡಿ ವಶದಲ್ಲಿರುವ ಮಾಜಿ ಸಚಿವ ಡಿಕೆ ಶಿವಕುಮಾರಗೆ ಇಂದು ಸಹ ಜಾಮೀನು ಸಿಗ್ಲಿಲ್ಲ. ಡಿಕೆಶಿ ಪರ ಅಭಿಷೇಕ ಮನು ಸಿಂಘ್ವಿ ಹಾಗೂ ಇಡಿ ಪರ ಕೆ.ಎಂ ನಟರಾಜ ಸುದೀರ್ಘವಾಗಿ ವಾದ ನಡೆಸಿದ್ರು.

ವಿಚಾರಣೆ ಆರಂಭದಲ್ಲಿ ಇಡಿ ಪರ ವಕೀಲರು ಬರದೆಯಿರುವ ಕಾರಣ, ಜಡ್ಜ್ ಗರಂ ಆಗಿದ್ರು. ಲಿಖಿತ ರೂಪದಲ್ಲಿ ವಾದ ಮಾಡಿಸುವಂತೆ 2 ದಿನ ಟೈಂ ನೀಡಿ ಜಾಮೀನು ಅರ್ಜಿ ಕಾಯ್ದಿರಿಸಿದ್ರು. ಬಳಿಕ ಲೇಟಾಗಿ ಬಂದ ವಕೀಲ ಕೆ.ಎಂ ನಟರಾಜ, ನ್ಯಾಯಮೂರ್ತಿಗಳ ಬಳಿ ತೆರಳಿ ವಾದ ಮಂಡನೆಗೆ ಅವಕಾಶ ಕೋರಿದ್ರು. ಆಗ ಎರಡು ಕಡೆ ವಕೀಲರನ್ನ ಕರೆಸಿಕೊಂಡು ಚರ್ಚೆ ನಡೆಸಿದ ಬಳಿಕ ವಾದ ಮಂಡನೆಗೆ ಅವಕಾಶ ನೀಡಿದ್ರು.

ವಾದ ಮಂಡನೆಗೂ ಮೊದ್ಲು ಕ್ಷಮೆ ಕೋರಿದ ಇಡಿ ಪರ ವಕೀಲರು, ಡಿಕೆಶಿ ಅವರನ್ನ ಅರೆಸ್ಟ್ ಮಾಡುವುದಕ್ಕೂ ಮೊದ್ಲು ವಿಚಾರಣೆ ಮಾಡಲಾಗಿದೆ. ಬಂಧಿಸಿದ ಬಳಿಕವೂ ವಿಚಾರಣೆ ನಡೆಸಲಾಗಿದೆ. ಅಕ್ರಮವಾಗಿ ಆಸ್ತಿ ಸಂಪಾದನೆ ಮಾಡುವುದು ಅಪರಾಧ ಅಂತಾ ಹೇಳಿದ್ರು. ಆಗ ನ್ಯಾಯಾಧೀಶರು ಪ್ರಕರಣದ ಇತಿಹಾಸ ಬೇಡ, ಜಾಮೀನು ಯಾಕೆ ಕೊಡಬಾರದು ಅನ್ನೋದನ್ನ ಹೇಳಿ ಅಂದ್ರು.

ಈ ವೇಳೆ ವಕೀಲ ನಟರಾಜ ಪಿಎಂಎಲ್ಎ ಸಕ್ಷೆನ್ ಗಳ ಕುರಿತು ವಿವರಿಸಿದ್ರು. ಹೈಕೋರ್ಟ್ ಆದೇಶ ಹಾಗೂ ಇಡಿ ಕಾಯ್ದೆಗಳ ಬಗ್ಗೆಯೂ ವಿವರಿಸಿದ್ರು. ಈ ವೇಳೆ ಮಧ್ಯಪ್ರವೇಶಿಸಿದ ಡಿಕೆಶಿ ಪರ ವಕೀಲ ಅಭಿಷೇಕ ಮನು ಸಿಂಘ್ವಿ, ಪ್ರಕರಣದ ನಾಲ್ವರು ಆರೋಪಿಗಳನ್ನ ಬಂಧಿಸಿದಂತೆ ರಕ್ಷಣೆ ನೀಡಿ ಸುಪ್ರೀಂ ಕೋರ್ಟ್ ನೀಡಿದ ಆದೇಶ ಪ್ರಸ್ತಾಪಿಸಿದ್ರು. ಬಳಿಕ ವಾದಿಸಿದ ನಟರಾಜ, ಹಣ ವರ್ಗಾವಣೆ ಸಂಬಂಧ ಸಾಕಷ್ಟು ದಾಖಲೆಗಳು ವಶಪಡಿಸಿಕೊಳ್ಳಲಾಗಿದೆ. ದಾಖಲೆ ರಹಿತ ಹಣ ಸಿಕ್ಕಿದೆ. ವಿಚಾರಣೆಗೆ ಸಹಕರಿಸಿಲ್ಲ. ಕೃಷಿಯಿಂದ ಆದಾಯ ಬಂದಿದೆ ಎಂದು ಹೇಳಿದ 12 ಮಂದಿಯನ್ನ ವಿಚಾರಣೆ ಮಾಡಲಾಗಿದೆ. ಯಾರನ್ನು ಆರೋಪಿಯನ್ನಾಗಿ ಮಾಡಿಲ್ಲಂತ ಹೇಳಿದ್ರು. ಹೀಗೆ ಹಲವು ವಿಚಾರಗಳನ್ನ ಇಡಿ ಪರ ವಕೀಲರು ಮಂಡಿಸಿದ್ರು.

ಬಳಿಕ ಡಿಕೆಶಿ ಪರ ವಕೀಲರು ವಾದ ಮಂಡನೆ ವೇಳೆ, ಕರ್ನಾಟಕದಲ್ಲಿ ಶಾಸಕರ ಖರೀದಿ ವೇಳೆ ಡಿಕೆಶಿ ನೋಡಿಕೊಂಡಿದ್ರು. ಡಿಕೆಶಿ ಅವರಿಗೆ ಜಾಮೀನು ನೀಡಬಹುದಾದ ಪ್ರಕರಣವಾಗಿದೆ. ಆದರೆ, ಇಡಿ ಇದಕ್ಕೆ ಆಕ್ಷೇಪ ಸಲ್ಲಿಸಿರುವ ಕಾರಣಕ್ಕೆ ಅವರ ವಕೀಲರಿಗೆ ನೊಬೆಲ್ ಪ್ರಶಸ್ತಿ ನೀಡಬೇಕು. ನಾನು ಶಿಫಾರಸು ಮಾಡ್ತೀನಿ ಎಂದು ವ್ಯಂಗ್ಯವಾಡಿದ್ರು. ಪಿಎಂಎಲ್ಎ ಕಾಯ್ದೆ ಅಡಿ ಪ್ರಕರಣವನ್ನ ತಪ್ಪಾಗಿ ಉಲ್ಲೇಖ ಮಾಡಲಾಗಿದೆ. ಅಲ್ದೇ, ಈ ಪ್ರಕರಣಕ್ಕೂ ಮಾಜಿ ವಿತ್ ಸಚಿವ ಪಿ.ಚಿದಂಬರಂ ಪ್ರಕರಣಕ್ಕೂ ಹೋಲಿಕೆಯಿದೆ ಅಂತಾ ವಾದ ಮಂಡಿಸಿದ್ರು.

ಹೀಗೆ ಸುದೀರ್ಘವಾಗಿ ವಾದ ಪ್ರತಿವಾದ ಮಂಡಿಸಲಾಯ್ತು. ಇದನ್ನ ಆಲಿಸಿದ ನ್ಯಾಯಾಧೀಶರು ಪ್ರಕರಣದ ಜಾಮೀನು ಆದೇಶವನ್ನ ಕಾಯ್ದಿರಿಸಿದ್ದು, ಸದ್ಯಕ್ಕೆ ಡಿಕೆಶಿಗೆ ಜಾಮೀನು ಇಲ್ಲ.




Leave a Reply

Your email address will not be published. Required fields are marked *

error: Content is protected !!