ಮದ್ವೆ ದಿನ ಹರಿದ ಸೀರೆ ಉಟ್ಟಿದ್ರಂತೆ ಈ ಬ್ಯೂಟಿ

396

ಬಾಲಿವುಡ್ ಸೇರಿದಂತೆ ಸೌಥ್ ಸಿನಿ ದುನಿಯಾದಲ್ಲಿಯೂ ಹೆಸರು ಮಾಡಿರುವ ನಟಿಯರಲ್ಲಿ ರಾಧಿಕಾ ಆಪ್ಟೆ ಕೂಡಾ ಒಬ್ರು. ತುಂಬಾ ವಿಭಿನ್ನ ಪಾತ್ರಗಳ ಮೂಲಕ ಸಾಕಷ್ಟು ಫ್ಯಾನ್ಸ್ ಹೊಂದಿದ್ದಾರೆ. ಪಾತ್ರಕ್ಕಾಗಿ ಎಷ್ಟು ಬೋಲ್ಡ್ ಆಗಿ ನಟಿಸಲು ಸಹ ಸೈ ಈ ನಟಿ.

ರಾಧಿಕಾ ಆಪ್ಟೆ ನಟನೆಯ ‘ದಿ ವೆಡ್ಡಿಂಗ್ ಗೆಸ್ಟ್’ ಅನ್ನೋ ಹಾಲಿವುಡ್ ಮೂವಿಗೆ ಸಂಬಂಧಿಸಿದಂತೆ ಮಾತ್ನಾಡುವಾಗ ಒಂದಿಷ್ಟು ವೈಯಕ್ತಿಕ ವಿಚಾರಗಳನ್ನ ಹೇಳಿಕೊಂಡಿದ್ದಾರೆ. 2012ರಲ್ಲಿ ಲಂಡನ್ ಮೂಲದ ಬೆನಡಿಕ್ಟ್ ಟೈಲರ್ ಅನ್ನುವರ ಜೊತೆ ರಿಜಿಸ್ಟರ್ ಮದುವೆಯಾದ ನಟಿ, ಅಂದು ಹರಿದ ಸೀರೆ ಉಟ್ಟಿದ್ರಂತೆ.

ಪತಿ ಬೆನಡಿಕ್ಟ್ ಟೈಲರ್ ಜೊತೆ ರಾಧಿಕಾ

ನಟಿ ರಾಧಿಕಾ, ಅಜ್ಜಿಯ ಸೀರೆ ಅಲ್ಲಲ್ಲಿ ಹರಿದು ಹೋಗಿದ್ರೂ ಅದನ್ನೇ ಉಟ್ಟುಕೊಂಡು ರಿಜಿಸ್ಟರ್ ಮದ್ವೆಯಾದ್ರಂತೆ. ರಿಸ್ಪೆಷನ್ ಗೆ 10 ಸಾವಿರದೊಳಗಿನ ಡ್ರೆಸ್ ಖರೀದಿಸಿದ್ದೆ ಅಂತಾ ಹೇಳಿದ್ದಾರೆ. ಮದ್ವೆಗೆ ಬಂದವರಿಗೆ ಮಾವಿನ ಗಿಡಗಳನ್ನ ನೀಡಿದ್ದೇವೆ ಎಂದ ರಾಧಿಕಾ, ಇದ್ದವರು ಮದ್ವೆಗಾಗಿ ಹೆಚ್ಚು ಖರ್ಚು ಮಾಡ್ತಾರೆ. ಕೆಲವರು ಸಾಲ ಮಾಡಿ ಮದ್ವೆ ಮಾಡಿಕೊಳ್ತಾರೆ. ಹೀಗಾಗಿ ಮದ್ವೆ ಅಂದ್ರೆ ಬಡವರ ಭಯ ಪಡ್ತಾರೆ ಅಂತಾ ಹೇಳಿದ್ರು.




Leave a Reply

Your email address will not be published. Required fields are marked *

error: Content is protected !!