ಕಟ್ಟಡ ಕುಸಿತ ಸಾವಿನ ಸಂಖ್ಯೆ 14ಕ್ಕೆ ಏರಿಕೆ

405

ಮುಂಬೈ: ಇಲ್ಲಿನ ಡೋಂಗ್ರಿ ಪ್ರದೇಶದಲ್ಲಿ ನಿನ್ನೆ ಬಹುಮಹಡಿ ಕಟ್ಟಡ ಕುಸಿದಿದೆ. ಅದರಡಿಯಲ್ಲಿ ಸಿಲುಕಿ ಸಾವನ್ನಪ್ಪಿದವರ ಸಂಖ್ಯೆ ಇಂದು 14ಕ್ಕೆ ಏರಿಕೆಯಾಗಿದೆ. ನಿನ್ನೆ ಮಧ್ಯರಾತ್ರಿವರೆಗೂ ರಕ್ಷಣಾ ಕಾರ್ಯಾಚರಣೆ ನಡೆದಿತ್ತು. ಈ ವೇಳೆ ನಾಲ್ಕು ಶವಗಳನ್ನ ಹೊರ ತೆಗೆಯಲಾಯ್ತು. ಇದಕ್ಕೂ ಮೊದ್ಲು 11ಜನರು ಮೃತಪಟ್ಟಿದ್ದರು. ಇದೀಗ ಅದು 14ಕ್ಕೆ ಏರಿಕೆಯಾಗಿದ್ದು ಆತಂಕ ಮೂಡಿಸಿದೆ.

ನೂರಾರು ವರ್ಷಗಳಷ್ಟು ಹಳೆಯದಾದ ಕೇಸರ್ ಭಾಯ್ ಕಟ್ಟಡ ಮಂಗಳವಾರ ಕುಸಿದಿದೆ. ಇದರಲ್ಲಿ 15 ಕುಟುಂಬಗಳ 50ಕ್ಕೂ ಹೆಚ್ಚು ಜನ ವಾಸವಾಗಿದ್ರು. ಇದ್ರಿಂದಾಗಿ ಇಷ್ಟೊಂದು ಸಾವು ನೋವು ಸಂಭವಿಸಿದೆ. ಮಹಾರಾಷ್ಟ್ರದಲ್ಲಿ ವರುಣನ ಅಬ್ಬರಕ್ಕೆ ಬಹುಮಹಡಿ ಕಟ್ಟಡಗಳು, ಗೋಡೆಗಳು ಕುಸಿದು ಹತ್ತಾರು ಜನರನ್ನ ಬಲಿ ಪಡೆಯುತ್ತಿವೆ. ಕಳೆದ ಹದಿನೈದು ದಿನಗಳ ಅಂತರದಲ್ಲಿ ಕಟ್ಟಡ ಕುಸಿತದ ಮೂರ್ನಾಲ್ಕು ಪ್ರಕರಣಗಳು ನಡೆದಿದ್ದು, ಸುಮಾರು 50ಕ್ಕೂ ಹೆಚ್ಚು ಜನ ಸಾವನ್ನಪ್ಪಿದ್ದಾರೆ.




Leave a Reply

Your email address will not be published. Required fields are marked *

error: Content is protected !!