ಟೀಂ ಇಂಡಿಯಾ ಪ್ರಾಯೋಜಕತ್ವ ಡ್ರೀಮ್ 11ಗೆ

222

ಪ್ರಜಾಸ್ತ್ರ ಕ್ರೀಡಾ ಸುದ್ದಿ

ಭಾರತ ಕ್ರಿಕೆಟ್ ತಂಡದ ಪ್ರಮುಖ ಪ್ರಯೋಜಕತ್ವವನ್ನು ಡ್ರೀಮ್ 11 ವಹಿಸಿಕೊಂಡಿದೆ ಎಂದು ಬಿಸಿಸಿಐ ಶನಿವಾರ ತಿಳಿಸಿದೆ. ಬೈಜೂಸ್ ಜೊತೆಗಿನ ಒಪ್ಪಂದ ಈ ವರ್ಷದ ಮಾರ್ಚ್ ತಿಂಗಳಲ್ಲಿ ಮುಗಿದಿದೆ. ಹೀಗಾಗಿ ಡ್ರೀಮ್ 11 ಆ ಜಾಗಕ್ಕೆ ಬಂದಿದೆ.

ಜುಲೈ 12ರಿಂದ 2 ಟೆಸ್ಟ್ ಪಂದ್ಯ ಸರಣಿಗಾಗಿ ವೆಸ್ಟ್ ಇಂಡೀಸ್ ಗೆ ಪ್ರಯಾಣ ಬೆಳಸಲಿರುವ ಟೀಂ ಇಂಡಿಯಾ ಆಟಗಾರರ ಜರ್ಸಿ ಮೇಲೆ ಡ್ರೀಮ್ 11 ಜಾಹೀರಾತು ಇರಲಿದೆ. ಈ ಕುರಿತು ಬಿಸಿಸಿಐ ಹಾಗೂ ಡ್ರೀಮ್ 11 ಪ್ರಾಯೋಜಕರು ಖುಷಿಯನ್ನು ವ್ಯಕ್ತಪಡಿಸಿದ್ದಾರೆ. ಭಾರತ ಕ್ರಿಕೆಟ್ ತಂಡಕ್ಕೆ ನಾವು ನಿರಂತರ ಬೆಂಬಲ ನೀಡುತ್ತೇವೆ ಎಂದು ಡ್ರೀಮ್ 11 ಸಂಸ್ಥಾಪಕ, ಸಿಇಒ ಹರ್ಷಾ ಜೈನ್ ತಿಳಿಸಿದ್ದಾರೆ.

2019ರಲ್ಲಿ ಓಪ್ಪೋ ಜಾಗಕ್ಕೆ ಬೈಜೂಸ್ ಬಂದಿತ್ತು. ಮೂರು ವರ್ಷಗಳ ಒಪ್ಪಂದ ಮುಗಿಯಿತು. ಆ ಜಾಗಕ್ಕೆ ಈಗ ಡ್ರೀಮ್ 11 ಬಂದಿದೆ.




Leave a Reply

Your email address will not be published. Required fields are marked *

error: Content is protected !!