ಮೊದಲ ವಿಶ್ವಕಪ್ ಎತ್ತಿ ಹಿಡಿದ ದಿನವಿದು

403

ಪ್ರಜಾಸ್ತ್ರ ಕ್ರೀಡಾ ಸುದ್ದಿ

ಜೂನ್ 25, 1983 ಅನ್ನೋದು ಇಂಡಿಯನ್ ಕ್ರಿಕೆಟ್ ಇತಿಹಾಸದಲ್ಲಿ ಎಂದೂ ಮರೆಯಲಾಗದ ದಿನ. ಯಾಕಂದ್ರೆ, ಮೊಟ್ಟ ಮೊದಲ ಬಾರಿಗೆ ವಿಶ್ವಕಪ್ ತನ್ನ ಮುಡಿಗೇರಿಸಿಕೊಂಡ ದಿನವಾಗಿದೆ. ಕಪಿಲದೇವ ನೇತೃತ್ವದ ಟೀಂ ಇಂಡಿಯಾ ಹೊಸ ದಾಖಲೆ ಬರೆದ ದಿನವಿದು.

ಒಂದು ಕಾಲದಲ್ಲಿ ವೆಸ್ಟ್ ಇಂಡೀಸ್ ಕ್ರಿಕೆಟ್ ಟೀಂ ಅಂದ್ರೆ ಎಲ್ಲರೂ ನಡಗುತ್ತಿದ್ರು. ದೈತ್ಯ ಕೆರಿಬಿಯನ್ಸ್ ಎದುರಿಸುವುದು ಸುಲಭದ ಮಾತಾಗಿರ್ಲಿಲ್ಲ. ಅಲ್ದೇ, 1975 ಹಾಗೂ 79ರಲ್ಲಿ ವಿಶ್ವಕಪ್ ಗೆದ್ದು ಹ್ಯಾಟ್ರಿಕ್ ಕನಸಿನಲ್ಲಿದ್ದ ಟೀಂ ಫೈನಲ್ ಗೆ ಬಂದಿತ್ತು. ಆಗ್ಲೂ ಎಲ್ಲರ ಹೇಳ್ತಿದಿದ್ದು ವೆಸ್ಟ್ ಇಂಡೀಸ್ ಗೆಲ್ಲುತ್ತೆ ಎಂದು.

ಅದು ಅಲ್ದೇ ಅಂದು ಮೊದಲ ಬ್ಯಾಟ್ ಮಾಡಿದ ಭಾರತ ತಂಡ, ಕ್ಯಾಪ್ಟನ್ ಕಪಿಲದೇವ ಹಾಗೂ ಸುನೀಲ ಗಾವಸ್ಕರ್ ವಿಫಲರಾಗಿದ್ರು. ಎಸ್.ಶ್ರೀಶಾಂತ ಬಾರಿಸಿದ್ದ 38 ರನ್ ಗರಿಷ್ಠ ಸ್ಕೋರ್ ಆಗಿತ್ತು. ಹೀಗಾಗಿ 183 ರನ್ ಗಳಿಗೆ ಸರ್ವಪತನ ಕಂಡಿತ್ತು.

ಈ ಸುಲಭ ಸ್ಕೋರ್ ಚೇಸ್ ಮಾಡಿದ ವೆಸ್ಟ್ ಇಂಡೀಸ್ ಟೀಂ ಮೊದಲ ಬಾರಿಗೆ ಸಂಕಷ್ಟಕ್ಕೆ ಸಿಲುಕಿತು. ಭಾರತದ ಬೌಲರ್ ಗಳ ಎದುರು ನಿಲ್ಲಲು ಒದ್ದಾಡಿತು. ಟೀಂ ಇಂಡಿಯಾದ ಮಾರಕ ಬೌಲಿಂಗ್ ದಾಳಿಯಿಂದ 140 ರನ್ ಗಳಿಗೆ ಆಲ್ ಔಟ್ ಆಯ್ತು. ಎಲ್ಲರ ಮಾತುಗಳನ್ನ ಸುಳ್ಳು ಮಾಡಿ 43 ರನ್ ಗಳಿಂದ ಗೆದ್ದ ಭಾರತ ಮೊದಲ ಬಾರಿಗೆ ವಿಶ್ವಕಪ್ ಎತ್ತಿ ಹಿಡಿದಾಗ ಇಡೀ ಭಾರತೀಯರಲ್ಲಿ ಸಂತೋಷವೋ ಸಂತೋಷ.

ಮದನ್ ಲಾಲ್ ಹಾಗೂ ಅಮರನಾಥ ತಲಾ 3 ವಿಕೆಟ್ ಕಿತ್ತಿದ್ರು. ಬಲ್ವಿಂದರ ಸಂದು 2, ಕಪಿಲದೇವ ಹಾಗೂ ರೋಜರ್ ಬಿನ್ನಿ ತಲಾ 1 ವಿಕೆಟ್ ಪಡೆದು ಮಿಂಚಿದ್ರು. ಈ ಮೂಲಕ ಜೂನ್ 25 ಇಂಡಿಯನ್ ಕ್ರಿಕೆಟ್ ಅಂಗಳದಲ್ಲಿ ದಾಖಲೆಯ ದಿನವಾಗಿ ಉಳಿದಿದೆ.




Leave a Reply

Your email address will not be published. Required fields are marked *

error: Content is protected !!