ಪ್ರಜಾಸ್ತ್ರ ಸಿನಿಮಾ ಡೆಸ್ಕ್
ಕನ್ನಡ ಚಿತ್ರರಂಗದಲ್ಲಿನ ಡ್ರಗ್ಸ್ ವಿಚಾರಕ್ಕೆ ಸಂಬಂಧಿಸಿದಂತೆ ಬಿಗ್ ಸ್ಕ್ರೀನ್ ನಿಂದ ಇದೀಗ ಸ್ಮಾಲ್ ಸ್ಕ್ರೀನ್ ನತ್ತ ಎಂಟ್ರಿಯಾಗಿದೆ. ಹೀಗಾಗಿ ಬ್ರಹ್ಮಗಂಟು ಧಾರವಾಹಿ ಖ್ಯಾತಿಯ ಭಾರತಿ ಭಟ್ ಹಾಗೂ ಗಟ್ಟಿಮೇಳ ಧಾರವಾಹಿಯ ಅಭಿಷೇಕಗೆ ಐಎಸ್ ಡಿ ವಿಚಾರಣೆ ನಡೆಸಿದೆ.
ಬ್ರಹ್ಮಗಂಟು ಧಾರವಾಹಿಯ ಗೀತಾ ಖ್ಯಾತಿ ನಟಿ, ಗಟ್ಟಿಮೇಳದ ವಿಕ್ರಾಂತ ಪಾತ್ರದ ಖ್ಯಾತಿಯ ನಟ ಅಭಿಷೇಕಗೆ ಐಎಸ್ ಡಿ ಸಖತ್ ಡ್ರಿಲ್ ಮಾಡಿದೆ. ಗೀತಾ ವಿಚಾರಣೆ ಎದುರಿಸಿದ್ದಾಳೆ. ನಾನು ಅಪರಾಧಿ ಅಲ್ಲ ಎಂದಿದ್ದಾರೆ. ಇನ್ನು ಅಭಿಷೇಕ ಶೂಟಿಂಗ್ ನಲ್ಲಿದ್ದು, ನೋಟಿಸ್ ಬಂದಿದೆ ವಿಚಾರಣೆಗೆ ಬರುತ್ತೇನೆ ಎಂದಿದ್ದಾರೆ.