ಮಸಾಜ್ ಪಾರ್ಲರ್ ಹೆಸರಲ್ಲಿ ಅಕ್ರಮ: ಇಬ್ಬರ ಬಂಧನ

299

ಪ್ರಜಾಸ್ತ್ರ ಸುದ್ದಿ

ಬೆಳಗಾವಿ: ಮಸಾಜ್ ಪಾರ್ಲರ್, ಸ್ಪಾ ಸೆಂಟರ್ ಹೆಸರಿನಲ್ಲಿ ಅನೈತಿಕ ಚಟುವಟಿಕೆ ನಡೆಸ್ತಿದ್ದ ಇಬ್ಬರನ್ನ ಬಂಧಿಸಲಾಗಿದೆ. ಪ್ರಕಾಶ ಹಾಗೂ ಕೇದಾರ ಶಿಂಧೆ ಬಂಧಿತ ಆರೋಪಿಗಳಾಗಿದ್ದಾರೆ.

ಇವರಿಬ್ಬರು ಮಸಾಜ್ ಪಾರ್ಲರ್ ಹೆಸರಿನಲ್ಲಿ ಆನ್ಲೈನ್ ಮೂಲಕ ಯುವಕರನ್ನ ಸೆಳೆಯುತ್ತಿದ್ದರು. ಡಿಸ್ಕೌಂಟ್ ರೂಪದಲ್ಲಿ ಯುವತಿಯರಿಂದ ಮಸಾಜ್ ಮಾಡಿಸುವ ನೆಪದಲ್ಲಿ ಅಕ್ರಮ ಚಟುವಟಿಕೆ ನಡೆಸ್ತಿದ್ದರು. ಇವರ ಮಾತನ್ನು ನಂಬಿ ಪಾರ್ಲರ್ ಗೆ ಹೋದ ಯುವಕರ ವಿಡಿಯೋ ಮಾಡಿಕೊಂಡು ಬೆದರಿಕೆ ಹಾಕಿ ಹಣ ವಸೂಲಿ ಮಾಡ್ತಿದ್ರು.




Leave a Reply

Your email address will not be published. Required fields are marked *

error: Content is protected !!