ಡ್ರಗ್ಸ್ ಮುಕ್ತ ಕರ್ನಾಟಕ ನಮ್ಮ ಗುರಿ: ವಿಜಯಪುರದಲ್ಲಿ ಡಿಜಿ-ಐಜಿಪಿ ಹೇಳಿಕೆ

330

ಪ್ರಜಾಸ್ತ್ರ ಸುದ್ದಿ

ವಿಜಯಪುರ: ಕರ್ನಾಟಕವನ್ನ ಡ್ರಗ್ಸ್ ಮುಕ್ತವಾಗಿ ಮಾಡುತ್ತೇವೆ ಎಂದು ಡಿಜಿ ಐಜಿಪಿ ಪ್ರವೀಣ ಸೂದ್ ಹೇಳಿದ್ದಾರೆ. ನಗರದಲ್ಲಿಂದು ಸಂಜೆ ಪೊಲೀಸ್ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಬಳಿಕ ಮಾತ್ನಾಡಿದ ಅವರು, ಬೆಂಗಳೂರು ಸಿಟಿ ಸೇರಿದಂತೆ ಜಿಲ್ಲೆಗಳಲ್ಲೂ ಹೆಚ್ಚಿನ ಕ್ರಮ ಕೈಗೊಳ್ಳುವಂತೆ ಐಜಿಪಿ ಹಾಗೂ ಎಸ್ಪಿಗಳಿಗೆ ಸೂಚಿಸಿದ್ದೇನೆ ಎಂದರು.

ಮಹಾರಾಷ್ಟ್ರ, ಆಂಧ್ರದ ಗಡಿಗೆ ಹೊಂದಿಕೊಂಡಿದ್ರೂ ಜಿಲ್ಲೆಗಳ ಗಡಿಯಲ್ಲಿ ಡ್ರಗ್ಸ್ ಒಳ ಬಾರದಂತೆ ತಡೆಯಲು ಮತ್ತು ಹೇಗೆ ಹತೋಟಿಗೆ ತರಬೇಕು ಎಂಬುದರ ಬಗ್ಗೆ ಚರ್ಚೆ ನಡೆಸಲಾಗಿದೆ.‌ ಪೊಲೀಸ್ ಕಾರ್ಯಾಚರಣೆಗಳ ಬಗ್ಗೆ ತಮಗೆ ಶೀಘ್ರದಲ್ಲೇ ಫಲಿತಾಂಶ ಸಿಗಲಿದೆ ಎಂದರು.

ಇನ್ನು ಕರೋನಾ ವಾರಿಯರ್ಸ್‌ ಗಳಾದ ಪೊಲೀಸ್ ಸಿಬ್ಬಂದಿ ಯಾರೆಲ್ಲ ಸಾವನ್ನಪ್ಪಿದ್ದಾರೆ, ಅವರಿಗೆ ರಾಜ್ಯ ಸರ್ಕಾರದಿಂದ 30 ಲಕ್ಷ ರೂಪಾಯಿ ಪರಿಹಾರವನ್ನ 48 ಗಂಟೆಯಲ್ಲೇ ನೀಡಲಾಗಿದೆ. ರಾಜ್ಯದಲ್ಲಿ 6000 ಸಾವಿರ ಪೊಲೀಸರಿಗೆ ಕರೋನಾ ಸೋಂಕು ತಗಲಿದ್ದು, ಅದರಲ್ಲಿ 44 ಜನ ಪೊಲೀಸರು ಅಸುನೀಗಿದ್ದಾರೆ. ಅವರೆಲ್ಲರಿಗೂ 30 ಲಕ್ಷ ಪರಿಹಾರ ನೀಡಲಾಗಿದೆ. ಪರಿಹಾರದ ಜೊತೆಗೆ ಸರ್ಕಾರ ನೀಡುವ ಸೌಲಭ್ಯ ನೀಡಲಾಗಿದೆ ಎಂದು ಪೊಲೀಸ್ ಮಹಾ ನಿರ್ದೇಶಕರು ತಿಳಿಸಿದ್ದಾರೆ.




Leave a Reply

Your email address will not be published. Required fields are marked *

error: Content is protected !!