ಸಮುದ್ರದ ದಡಗಳಲ್ಲಿ ಹೆಚ್ಚು‌ ಮಲಿನ: ಪ್ರೊ.ಎಸ್.ರಾಜಶೇಖರ

401

ಪ್ರಜಾಸ್ತ್ರ ಸುದ್ದಿ

ಧಾರವಾಡ: ಜೀವ ವೈವಿಧ್ಯತೆ, ಪರಿಸರ ಪರಂಪರೆಯನ್ನು ಸಂರಕ್ಷಣೆಗೆ ಸ್ವಯಂ ಪ್ರೇರಿತರಾಗಿ ತೊಡಗಿಸಿಕೊಳ್ಳಬೇಕು ಎಂದು‌ ಕರ್ನಾಟಕ ವಿಶ್ವವಿದ್ಯಾಲಯ ವಿಶ್ರಾಂತ ಕುಲಸಚಿವ ಪ್ರೊ.ಎಸ್.ರಾಜಶೇಖರ ಅಭಿಪ್ರಾಯಪಟ್ಟರು. ಕರ್ನಾಟಕ ಕಾಲೇಜಿನ ಸ್ನಾತಕ, ಸ್ನಾತಕೋತ್ತರ ಮತ್ತು ಹೊಟೇಲ್ ‌ಮ್ಯಾನೇಜಮೆಂಟ್ ಅಧ್ಯಯನ ವಿಭಾವು ‘ಅರ್ಥ ಡೇ’ ದಿನದ ಅಂಗವಾಗಿ ಆಯೋಜಿಸಿದ ಸ್ವಚ್ಛತಾ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದ್ದರು.

ಆಚರಣೆಗಳು ಕೇವಲ ದಿನಾಚರಣೆಯಗೋಸ್ಕರ ಮಾತ್ರವಲ್ಲದೆ  ಸಾಧ್ಯವಾದಷ್ಟು ನಿಮ್ಮ‌ ಮನೆಯ ಸುತ್ತಲೂ ಮತ್ತು ಕ್ಲಾಸ್ ರೂಮ್ ನಲ್ಲಿ ಸ್ವಚ್ಚತೆ ಕಾಪಾಡುವುದು ವಿದ್ಯಾರ್ಥಿಗಳ ಪ್ರಮುಖ ಜವಾಬ್ದಾರಿಯಾಗಿದೆ. ನಿಮ್ಮ ಸಾಮರ್ಥ್ಯದ ಅನುಗುಣವಾಗಿ ಪರಿಸರ ಸಂರಕ್ಷಣೆ ಮಾಡಲು ಗುರಿಯನ್ನು ಇಟ್ಟುಕೊಳ್ಳಬೇಕು. ದೇಶದ ಅನೇಕ ಸಮುದ್ರದ ದಡಗಳಲ್ಲಿ ಹೆಚ್ಚು‌ ಮಲಿನವಾಗುತ್ತಿವೆ. ಈ ನಿಟ್ಟಿನಲ್ಲಿ ಪ್ರವಾಸಿಗರು ಸ್ವಚ್ಛತೆಗೆ ಹೆಚ್ಚು ಒತ್ತು ನೀಡಬೇಕು ಎಂದರು.

ಪ್ರಾಧ್ಯಾಪಕಿ ಪ್ರೊ. ರಾಣಿ ರವಿಶಂಕರ್, ಪ್ರಾಧ್ಯಾಪಕಿ ಡಾ.ಸುಷ್ಮಾ ಮಳಗಿ, ಪ್ರವಾಸೋದ್ಯಮ ವಿಭಾಗದ ಸಂಯೋಜಕ ಡಾ.ಜಗದೀಶ್ ಕಿವುಡನ್ನವರ ಮಾತನಾಡಿದರು. ಇದೆ ಸಂದರ್ಭದಲ್ಲಿ ಪ್ರವಾಸೋದ್ಯಮ ವಿಭಾಗದ ಆವರಣದಲ್ಲಿ ತೆಂಗು, ಹಲಸಿನ ಹಣ್ಣು ಸೇರಿದಂತೆ ವಿವಿಧ ಸಸ್ಯಗಳನ್ನು ನೀಡಲಾಯಿತು.

ಕಾರ್ಯಕ್ರಮದಲ್ಲಿ ಪ್ರೊ.ಜಗದೀಶ್ ಸವಣೂರಮಠ, ರಾಹುಲ ತೋರಗಲಮಠ, ಶಿಲ್ಪಾ ರೇವಣಕರ, ಸುಷ್ಮಾ ಅರಳಿ, ವಿಜಯಕುಮಾರಿ, ಲಕ್ಷ್ಮಿ ಅಣ್ಣಿಗೇರಿ, ಸಂದೀಪ್ ಘೊರ್ಪಡೆ, ಮಾಲತೇಶ ಹುಣಸಿಮರದ, ಡಾ.ಪ್ರಭಾಕರ್ ಕಾಂಬಳೆ ಸೇರಿದಂತೆ ಪ್ರವಾಸೋದ್ಯಮ ಮತ್ತು ಹೊಟೇಲ್ ‌ಮ್ಯಾನೇಜಮೆಂಟ್ ಕೋರ್ಸಿನ ವಿದ್ಯಾರ್ಥಿಗಳು ಹಾಜರಿದ್ದರು.




Leave a Reply

Your email address will not be published. Required fields are marked *

error: Content is protected !!