ಜಾರ್ಖಂಡ್ ಸಿಎಂ ನಿವಾಸದ ಮೇಲೆ ಇಡಿ ದಾಳಿ

152

ಪ್ರಜಾಸ್ತ್ರ ಸುದ್ದಿ

ನವದೆಹಲಿ: ಜಾರ್ಖಂಡ್ ಮುಖ್ಯಮಂತ್ರಿ ಹೇಮಂತ್ ಸೂರೇನ್ ಅವರ ದೆಹಲಿ ಮನೆಯ ಮೇಲೆ ಇಡಿ ಅಧಿಕಾರಿಗಳು ಸೋಮವಾರ ದಾಳಿ ನಡೆಸಿದ್ದಾರೆ. ಈ ವೇಳೆ ಒಂದು ಎಸ್ ಯುವಿ ಕಾರು, 36 ಲಕ್ಷ ರೂಪಾಯಿ ಹಾಗೂ ಕೆಲ ದಾಖಲೆಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ತಿಳಿದು ಬಂದಿದೆ.

ಜಮೀನು ಅಕ್ರಮ ಹಗರಣ ಸಂಬಂಧ ಈ ದಾಳಿ ನಡೆದಿದೆ ಎಂದು ಹೇಳಲಾಗುತ್ತಿದೆ. ಸುಮಾರು 13 ಗಂಟೆಗಳ ಕಾಲ ಸಿಎಂ ಸೂರೇನ್ ಅವರ ಹೇಳಿಕೆಯನ್ನು ದಾಖಲಿಸಿಕೊಳ್ಳಲು ಅಧಿಕಾರಿಗಳು ಕಾದಿದ್ದಾರೆ. ಜನವರಿ 31ರ ಮಧ್ಯಾಹ್ನ 1 ಗಂಟೆಗೆ ಸಮಯ ನೀಡಿದ್ದಾರೆ. ಈ ಘಟನೆ ಸಂಬಂಧ ಜಾರ್ಖಂಡ್ ಮಕ್ತಿ ಮೋರ್ಚಾದ ಮೈತ್ರಿ ಸರ್ಕಾರ ಶಾಸಕರೊಂದಿಗೆ ಸಭೆ ನಡೆಸಲಾಗುತ್ತಿದೆ.




Leave a Reply

Your email address will not be published. Required fields are marked *

error: Content is protected !!