ಡಿಕೆಶಿ ತಾಯಿಗೆ ಇಡಿ ಸಮನ್ಸ್

351

ಬೆಂಗಳೂರು: ಈಗಾಗ್ಲೇ ನ್ಯಾಯಾಂಗ ಬಂಧನದಲ್ಲಿರುವ ಮಾಜಿ ಸಚಿವ ಡಿ.ಕೆ ಶಿವಕುಮಾರ ತಾಯಿಗೆ ಇಡಿ ಸಮನ್ಸ್ ನೀಡಿದೆ. ಅಕ್ಟೋಬರ್ 15ರಂದು ವಿಚಾರಣೆಗೆ ಹಾಜರಾಗುವಂತೆ ಗೌರಮ್ಮಗೆ ಸಮನ್ಸ್ ನೀಡಲಾಗಿದೆ.

ಡಿ.ಕೆ ಶಿವಕುಮಾರ ಹಾಗೂ ತಾಯಿ ಗೌರಮ್ಮ ನಡುವೆ ಹಣಕಾಸಿನ ವ್ಯವಹಾರ ನಡೆದಿದೆ. ಗೌರಮ್ಮ ಅವರ ಬಳಿ 273 ಕೋಟಿ ಬೇನಾಮಿ ಆಸ್ತಿ ಪತ್ತೆಯಾಗಿದೆ. ಅಲ್ದೇ, ಮೊಮ್ಮಗಳಿಗೆ 5 ಎಕರೆ ಗಿಫ್ಟ್ ಡಿಡಿ ನೀಡಿದ್ದಾರೆ. ಇದೆಲ್ಲದರ ವಿಚಾರವಾಗಿ ಗೌರಮ್ಮ ಅವರಿಗೆ ಸಮನ್ಸ್ ನೀಡಲಾಗಿದೆ.

ಡಿ.ಕೆ ಶಿವಕುಮಾರ ಸಹೋದರ ಸಂಸದ ಡಿ.ಕೆ ಸುರೇಶ, ಮಗಳು ಐಶ್ವರ್ಯ ಬಳಿಕ ಇದೀಗ ತಾಯಿ ಗೌರಮ್ಮಗೆ ಸಮನ್ಸ್ ನೀಡಲಾಗಿದೆ.




Leave a Reply

Your email address will not be published. Required fields are marked *

error: Content is protected !!