ಅನರ್ಹರ ತೀರ್ಪು ಬರುವವರೆಗೂ ನೋ ಬಿಜೆಪಿ ಟಿಕೆಟ್!

332

ನ್ಯೂಸ್ ಡೆಸ್ಕ್:

ಬೆಂಗಳೂರು: ಮೈತ್ರಿ ಸರ್ಕಾರ ಪತನವಾಗಿ ಬಿಜೆಪಿ ಸರ್ಕಾರ ಆಡಳಿತಕ್ಕೆ ಬರುವುದಕ್ಕೆ ಅನುಕೂಲ ಮಾಡಿಕೊಟ್ಟ ಅನರ್ಹ ಶಾಸಕರ ಅಂತಿಮ ತೀರ್ಪು ಬರುವ ತನಕ, ಉಪ ಚುನಾವಣೆಗೆ ಬಿಜೆಪಿ ಅಭ್ಯರ್ಥಿಗಳನ್ನ ಘೋಷಣೆ ಮಾಡುವುದಿಲ್ಲ ಅನ್ನೋ ನಿರ್ಧಾರಕ್ಕೆ ಬರಲಾಗಿದೆ.

ತ್ರೀಸದಸ್ಯ ಪೀಠ ನವೆಂಬರ್ 21ರಂದು ಅರ್ಜಿ ವಿಚಾರಣೆಯನ್ನ ಕೈಗೆತ್ತಿಕೊಳ್ಳಲಿದೆ. ಈಗಾಗ್ಲೇ ಎರಡು ಕಡೆ ವಾದ ವಿವಾದವನ್ನ ಕೇಳಲಾಗಿದೆ. ಬಹುತೇಕ ಅಂತಿಮ ಹಂತದಲ್ಲಿದ್ದು, ತೀರ್ಪು ಪ್ರಕಟಿಸುತ್ತಾ? ಸಂವಿಧಾನಿಕ ಪೀಠಕ್ಕೆ ವರ್ಗಾಹಿಸುತ್ತಾ ಅನ್ನೋ ಕುತೂಹಲವಿದೆ. ಒಂದು ವೇಳೆ ಈ ಹಿಂದಿನ ಸ್ಪೀಕರ್ ರಮೇಶಕುಮಾರ ಅವರ ಆದೇಶ ಎತ್ತಿ ಹಿಡಿದ್ರೆ, ರಾಜ್ಯ ರಾಜಕೀಯದಲ್ಲಿನ ಚಿತ್ರಣವೇ ಬದಲಾಗಲಿದೆ.

ಡಿಸೆಂಬರ್ 5 ರಂದು ರಾಜ್ಯದ 15 ಕ್ಷೇತ್ರಗಳಿಗೆ ಉಪ ಚುನಾವಣೆ ನಡೆಯಲಿದೆ. ಡಿಸೆಂಬರ್ 9ಕ್ಕೆ ಫಲಿತಾಂಶ ಪ್ರಕಟವಾಗಲಿದೆ. ಹೀಗಾಗಿ ಅನರ್ಹ 15 ಜನ ಶಾಸಕರಲ್ಲಿ ಇನ್ನೂ ಟೆನ್ಷನ್ ಇದ್ದೇ ಇದೆ.




Leave a Reply

Your email address will not be published. Required fields are marked *

error: Content is protected !!