ಟಿವಿ ಮೊದ್ಲು ಡಿಜಿಟಲ್ ಮೀಡಿಯಾಗೆ ನಿರ್ಬಂಧ ವಿಧಿಸಿ: ಕೇಂದ್ರ

318

ಪ್ರಜಾಸ್ತ್ರ ಸುದ್ದಿ

ನವದೆಹಲಿ: ಎಲೆಕ್ಟ್ರಾನಿಕ್ ಮೀಡಿಯಾಗಳ ಅತಿರೇಕಕ್ಕೆ ಕಡಿವಾಣ ಹಾಕುವ ಸಂಬಂಧ ಸುಪ್ರೀಂ ಕೋರ್ಟ್ ಮುಂದಾಗಿದೆ. ಇದರ ನಡುವೆ ಕೇಂದ್ರ ಸರ್ಕಾರ ಸುಪ್ರೀಂಗೆ ತನ್ನ ಹೇಳಿಕೆಯನ್ನ ಸಲ್ಲಿಸಿದ್ದು, ಎಲೆಕ್ಟ್ರಾನಿಕ್ ಮೀಡಿಯಾಗೂ ಮೊದ್ಲು ಡಿಜಿಟಲ್ ಮಾಧ್ಯಮಗಳ ಮೇಲೆ ನಿರ್ಬಂಧ ವಿಧಿಸಿ ಎಂದಿದೆ.

ಸುದರ್ಶನ ಟಿವಿಯ ಬಿಂದಾಸ್ ಬೋಲ್ ಕಾರ್ಯಕ್ರಮಕ್ಕೆ ಸಂಬಂಧಿಸಿದಂತೆ ಸುಪ್ರೀಂಗೆ ಅಫಿಡೆವಿಟ್ ಸಲ್ಲಿಸಿದ್ದು, ಮುದ್ರಣ ಹಾಗೂ ಎಲೆಕ್ಟ್ರಾನಿಕ್ ಮೀಡಿಯಾಗಳಿಗೆ ಈಗಾಗ್ಲೇ ಹಲವು ನಿಯಮಗಳು ಇವೆ. ಸುಪ್ರೀಂ ಕೋರ್ಟ್ ಮಾಧ್ಯಮಗಳ ನಿರ್ಬಂಧ ಹೇರುವ ನಿರ್ಧಾರ ತೆಗೆದುಕೊಳ್ಳುವುದಾದ್ರೆ ಮೊದ್ಲು ಡಿಜಿಟಲ್ ಮೀಡಿಯಾಗಳ ಮೇಲೆ ತೆಗೆದುಕೊಳ್ಳಲಿ ಎಂದಿದೆ.

ತುಂಬಾ ವೇಗವಾಗಿ ಮಾಹಿತಿ ಹಂಚುವ ಫೇಸ್ ಬುಕ್, ವಾಟ್ಸಪ್, ಟ್ವೀಟರ್ ನಂತಹ ಸೋಷಿಯಲ್ ಮೀಡಿಯಾಗಳ ಮೇಲೆ ನಿರ್ಬಂಧ ವಿಧಿಸುವ ಅವಶ್ಯಕತೆಯಿದೆ ಎಂದು ಕೇಂದ್ರ ವಾರ್ತಾ ಮತ್ತು ಪ್ರಸಾರ ಸಚಿವಾಲಯ ಹೇಳಿದೆ. ಎಲೆಕ್ಟ್ರಾನಿಕ್ ಹಾಗೂ ಮುದ್ರಣ ಮಾಧ್ಯಮದಲ್ಲಿ ಒಂದು ಬಾರಿ ಮಾತ್ರ ಸುದ್ದಿ ಪ್ರಸಾರವಾಗುತ್ತೆ ಎಂದು ಹೇಳಿದೆ. ಆದ್ರೆ, ವಾಸ್ತವದಲ್ಲಿ ಇದು ಹೀಗೆ ನಡೆಯುತ್ತಿದ್ಯಾ? ಸೋಷಿಯಲ್ ಮೀಡಿಯಾಗಳಿಗೆ ನಿರ್ಬಂಧ ಹೇರುವ ಬದ್ಲು ಆ ಎಲ್ಲ ಆ್ಯಪ್ ಗಳನ್ನ ದೇಶದಲ್ಲಿ ಬಂದ್ ಮಾಡುವ ಅಧಿಕಾರಿ ಕೇಂದ್ರಕ್ಕೆ ಇದೆ. ಅದನ್ನ ಮಾಡಬಹುದಲ್ಲ.

ಮಾಧ್ಯಮಗಳ ಸ್ವಾತಂತ್ರ್ಯದ ಜೊತೆಗೆ ತಮ್ಮ ಮೇಲಿರುವ ಜವಾಬ್ದಾರಿ ತಿಳಿದುಕೊಳ್ಳಬೇಕಿದೆ. ಪ್ರಜಾಪ್ರಭುತ್ವದಲ್ಲಿ ಮಾಧ್ಯಮಗಳ ಪಾತ್ರ ಬಹುದೊಡ್ಡದಿದೆ. ಆದ್ರೆ, ಇದನ್ನ ಬಿಟ್ಟು ಸಾಮಾನ್ಯ ಜನರಿಗೆ ಉಪಯೋಗವಾಗದ ವಿಚಾರವನ್ನ ಇಡೀ ದಿನ ಪ್ರಸಾರ ಮಾಡುವಂತಹ ಕಾರ್ಯಗಳಿಗೆ ಕಡಿವಾಣ ಹಾಕಬೇಕಿದೆ.




Leave a Reply

Your email address will not be published. Required fields are marked *

error: Content is protected !!