ಸಂಜೆ 6 ಗಂಟೆಗೆ ಮೋದಿ ಭಾಷಣ

270

ಪ್ರಜಾಸ್ತ್ರ ಸುದ್ದಿ

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಇಂದು ಸಂಜೆ 6 ಗಂಟೆಗೆ ಭಾಷಣ ಮಾಡಲಿದ್ದಾರೆ. ಈ ಬಗ್ಗೆ ಟ್ವೀಟ್ ಮಾಡಿರುವ ಪ್ರಧಾನಿ ಮೋದಿ, ಭಾಷಣದ ಬಗ್ಗೆ ತಿಳಿಸಿದ್ದಾರೆ. ಹೀಗಾಗಿ ದೇಶದ ಜನರಲ್ಲಿ ಕುತೂಹಲ ಮೂಡಿಸಿದೆ.

ಹಬ್ಬದ ಸಂದರ್ಭದಲ್ಲಿ ಕರೋನಾ ಜಾಗೃತದ ಬಗ್ಗೆ ಮಾತ್ನಾಡಬಹುದು, ಆರ್ಥಿಕತೆಗೆ ಶಕ್ತಿ ತುಂಬುವ ಬಗ್ಗೆ ಹೇಳಬಹುದಾ, ದೇಶದ ಜನತೆಗೆ ಏನಾದ್ರು ಘೋಷಣೆ ಮಾಡಬಹುದಾ, ನಿರುದ್ಯೋಗ ಸಮಸ್ಯೆ ಎದುರಿಸ್ತಿರುವ ಭಾರತದಲ್ಲಿ ಉದ್ಯೋಗ ಸೃಷ್ಟಿ ಬಗ್ಗೆ ಏನಾದ್ರೂ ಮಾತ್ನಾಡಬಹುದಾ ಅನ್ನೋ ಕುತೂಹಲ ಮೂಡಿದೆ.

ಸಂಜೆ 6 ಗಂಟೆಗೆ ಮೋದಿ ವಿಡಿಯೋ ಸಂದೇಶ ನೀಡುವ ಸಾಧ್ಯತೆಯಿದ್ದು, ಯಾವ ವಿಷಯದ ಬಗ್ಗೆ ಮಾತ್ನಾಡ್ತಾರೆ ಅನ್ನೋದಕ್ಕೆ ಸಂಜೆ ಉತ್ತರ ಸಿಗಲಿದೆ.




Leave a Reply

Your email address will not be published. Required fields are marked *

error: Content is protected !!