ಅಭಿಮಾನಿಗಳಿಗೆ ವಿಡಿಯೋ ಸಂದೇಶ ನೀಡಿದ ಕಪಿಲ್ ದೇವ್

243

ಪ್ರಜಾಸ್ತ್ರ ಕ್ರೀಡಾ ಸುದ್ದಿ

ಹೃದಯಾಘಾತದಿಂದಾಗಿ ಇತ್ತೀಚೆಗೆ ಆಸ್ಪತ್ರೆ ಸೇರಿದ್ದ ಇಂಡಿಯನ್ ಕ್ರಿಕೆಟ್ ಟೀಂ ಮಾಜಿ ಕ್ಯಾಪ್ಟನ್ ಕಪಿಲ್ ದೇವ್ ಇದೀಗ ಸಂಪೂರ್ಣ ಗುಣಮುಖರಾಗಿದ್ದಾರೆ. ತಮ್ಮ ಆರೋಗ್ಯಕ್ಕಾಗಿ ಹಾರೈಸಿದ್ದ ಅಭಿಮಾನಿಗಳಿಗೆ, ಸ್ನೇಹಿತರಿಗೆ ವಿಡಿಯೋ ಮೂಲಕ ಧನ್ಯವಾದ ಸಲ್ಲಿಸಿದ್ದಾರೆ.

ಆಂಜಿಯೋಪ್ಲಾಸ್ಟಿ ಚಿಕಿತ್ಸೆ ಮಾಡಿಸಿಕೊಂಡಿರುವ ಕಪಿಲ್ ದೇವ್, ಈಗ ಸಂಪೂರ್ಣ ಗುಣಮುಖರಾಗಿದ್ದಾರೆ. 1983ರಲ್ಲಿ ತೋರಿಸಿದ ಪ್ರೀತಿಯನ್ನ ಈಗ್ಲೂ ತೋರಿಸಿದ್ದೀರಿ. ತುಂಬಾ ಧನ್ಯವಾದಗಳು ಎಂದಿರುವ ಅವರು, ಅವರ ಜೀವನಚರಿತ್ರೆ ಸಿನಿಮಾವಾಗ್ತಿದ್ದು ಅದು ಯಾವಾಗ ರಿಲೀಸ್ ಆಗುತ್ತೆ ನೋಡೋಣ. ಈ ವರ್ಷ ಮುಗಿಯುತ್ತಾ ಬರುತ್ತಿದೆ. ಆದಷ್ಟು ಬೇಗ ಭೇಟಿಯಾಗೋಣ ಎಂದಿದ್ದಾರೆ.




Leave a Reply

Your email address will not be published. Required fields are marked *

error: Content is protected !!