ನಕಲಿ ಟಿಕೆಟ್ ಪರಿಶೀಲನಾ ಅಧಿಕಾರಿ ಎಸ್ಕೇಪ್

404

ಪ್ರಜಾಸ್ತ್ರ ಸುದ್ದಿ

ಯಾದಗಿರಿ: ಸರ್ಕಾರಿ ಬಸ್ ನಲ್ಲಿ ಟಿಕೆಟ್ ತಪಾಸಣೆ ಅಧಿಕಾರಿ ಎಂದು ಬಸ್ ಹತ್ತಿದ ವ್ಯಕ್ತಿಯೊಬ್ಬ ನಕಲಿ ಎಂದು ತಿಳಿದು ಬಂದಿದೆ. ವಡಗೇರಾ ತಾಲೂಕಿನ ಖಾನಾಪುರದಲ್ಲಿ ಅಧಿಕಾರಿ ಎಂದು ಬಸ್ ಹತ್ತಿದವನು ಐಡಿ ಕೇಳುತ್ತಿದ್ದಂತೆ ಎಸ್ಕೇಪ್ ಆಗಿದ್ದಾನೆ.

ಸುರಪುರದಿಂದ ಯಾದಗಿರಿ ಕಡೆ ಹೊರಟಿದ್ದ ಕೆಎ 33, ಎಫ್ 0203 ನಂಬರಿನ ಸರ್ಕಾರಿ ಬಸ್ ಗೆ ಖಾನಾಪುರ ಹತ್ತಿರ ಹತ್ತಿದ್ದಾನೆ. ಸಫಾರಿ ಬಟ್ಟೆ ಧರಿಸಿದ್ದ ನಕಲಿ ಅಧಿಕಾರಿಯ ಬಗ್ಗೆ ಅನುಮಾನದ ಬಂದು ಬಸ್ ಕಂಡೆಕ್ಟರ್ ಹಾಗೂ ಸಾರ್ವಜನಿಕರು ಐಡಿ ಕಾರ್ಡ್ ಕೇಳಿದಾಗ ಬಸ್ಸಿನಿಂದ ಇಳಿದು ಎಸ್ಕೇಪ್ ಆಗಿದ್ದಾನೆ.

ಬಸ್ಸಿನಿಂದ ಓಡಿ ಹೋಗುವಾಗ ಆತನ ಮೊಬೈಲ್ ಕಿತ್ತುಕೊಳ್ಳಲಾಗಿದೆ. ನಂತರ ಯಾದಗಿರಿ ಸಾರಿಗೆ ಅಧಿಕಾರಿಗೆ ಮೊಬೈಲ್ ನೀಡಿ ಮಾಹಿತಿ ತಿಳಿಸಲಾಗಿದೆ.




Leave a Reply

Your email address will not be published. Required fields are marked *

error: Content is protected !!