ನಕಲಿ ಟಿಆರ್ ಪಿ ಹಗರಣ: ವಿಚಾರಣೆಗೆ ಬರದ ರಿಪಬ್ಲಿಕ್ ಟಿವಿ ಸಿಎಫ್ಓ

293

ಪ್ರಜಾಸ್ತ್ರ ಸುದ್ದಿ

ಮುಂಬೈ: ನಕಲಿ ಟಿಆರ್ ಪಿ ಜಾಲದಲ್ಲಿ ರಾಷ್ಟ್ರೀಯ ಸುದ್ದಿ ವಾಹಿನಿ ರಿಪಬ್ಲಿಕ್ ಟಿವಿ ಭಾಗಿಯಾಗಿದೆ ಅನ್ನೋ ಮಾತುಗಳು ಕೇಳಿ ಬಂದಿವೆ. ಈ ಸಂಬಂಧ ಮುಂಬೈ ಪೊಲೀಸರು ಟಿವಿಯ ಮುಖ್ಯ ಹಣಕಾಸು ಅಧಿಕಾರಿ ಶಿವ ಸುಬ್ರಮಣಿಯಂ ಅವರನ್ನ ವಿಚಾರಣೆಗೆ ಕರೆದಿದ್ರು. ಆದ್ರೆ, ಅವರು ಗೈರಾಗಿದ್ದಾರೆ.

ಶನಿವಾರ ವಿಚಾರಣೆಗೆ ಹಾಜರಾಗುವಂತೆ ಅಪರಾಧ ದಳದ ಕ್ರೈಂ ಇಂಟಲಿಜೆನ್ಸ್ ವಿಭಾಗ ಶಿವ ಸುಬ್ರಮಣಿಯಂ ಅವರಿಗೆ ಸಮನ್ಸ್ ನೀಡಿತ್ತು. ಆದ್ರೆ, ಸಿಎಫ್ಓ ಅವರು ವಿಚಾರಣೆಗೆ ಹಾಜರಾಗಿಲ್ಲ. ಸೆಟ್ ಟಾಪ್ ಬಾಕ್ಸ್ ಗಳ ಮೂಲಕ ವೀಕ್ಷಕರು ಯಾವ ಯಾವ ಟಿವಿಯಲ್ಲಿ ಯಾವ ಕಾರ್ಯಕ್ರಮಗಳನ್ನು ಹೆಚ್ಚಿಗೆ ನೋಡುತ್ತಾರೆ ಅನ್ನೋದು ತಿಳಿಯುತ್ತೆ. ಹೀಗಾಗಿ ಟಿಆರ್ ಪಿ(ಟೆಲಿವಿಷನ್ ರೇಟಿಂಗ್ ಪಾಯಿಂಟ್ಸ್) ಎಂದು ಕರೆಯಲಾಗುತ್ತೆ. ಇದರಲ್ಲಿಯೇ ಮೋಸವಾಗಿದೆ ಅನ್ನೋ ಆರೋಪ ಕೇಳಿ ಬಂದಿದೆ.




Leave a Reply

Your email address will not be published. Required fields are marked *

error: Content is protected !!