ಪ್ರಶಸ್ತಿಗಳನ್ನ ಕೊಳ್ಳೆ ಹೊಡೆದ ‘ಗಲ್ಲಿ ಬಾಯ್’

350

ಗುವಾಹಟಿ: ಬಾಲಿವುಡ್ ಅಂಗಳದ ಗಲ್ಲಿ ಬಾಯ್ ಮೂವಿ ಫಿಲ್ಮ್ ಫೇರ್ ಅವಾರ್ಡ್ ನಲ್ಲಿ ಪ್ರಶಸ್ತಿಗಳನ್ನ ಕೊಳ್ಳೆ ಹೊಡೆದಿದೆ. ನಟ ರಣವೀರ ಸಿಂಗ್, ನಟಿ ಆಲಿಯಾ ಭಟ್ ಅತ್ಯುತ್ತಮ ನಟ ಹಾಗೂ ನಟಿ ಪ್ರಶಸ್ತಿ ಪಡೆದಿದ್ದಾರೆ. ಇದರ ಜೊತೆಗೆ ಒಟ್ಟು 13 ಪ್ರಶಸ್ತಿಗಳನ್ನ ಗಲ್ಲಿ ಬಾಯ್ ಟೀಂ ಪಡೆದುಕೊಂಡಿದೆ.

ಶನಿವಾರ ತಡರಾತ್ರಿ ನಡೆದ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಗಲ್ಲಿ ಬಾಯ್ಸ್ ಅಬ್ಬರ ಜೋರಾಗಿತ್ತು. ನಿರ್ದೇಶಕ ಝೋಯಾ ಅಖ್ತರ್ ಗೆ ಬೆಸ್ಟ್ ಡೈರೆಕ್ಟರ್, ಸಿದ್ಧಾರ್ಥ ಚತುರ್ವೇದಿ ಹಾಗೂ ಅಮೃತಾ ಸುಭಾಷಗೆ ಬೆಸ್ಟ್ ಪೋಷಕ ನಟ ಮತ್ತು ನಟಿ, ಬೆಸ್ಟ್ ಮ್ಯೂಸಿಕ್ ಅಂಕುರ್ ತಿವಾರಿ, ಝೋಯಾ ಅಖ್ತರ್, ಬೆಸ್ಟ್ ಡೈಲಾಗ್, ಚಿತ್ರಕಥೆ ಹಾಗೂ ಅಪ್ನಾ ಟೈಂ ಆಯೇಗಾ ಹಾಡಿಗೆ ಅತ್ಯುತ್ತಮ ಸಾಹಿತ್ಯ.. ಹೀಗೆಗಿ ಬರೋಬ್ಬರಿ 13 ಪ್ರಶಸ್ತಿಗಳನ್ನ ‘ಗಲ್ಲಿ ಬಾಯ್’ ಪಡೆದುಕೊಂಡಿದೆ.




Leave a Reply

Your email address will not be published. Required fields are marked *

error: Content is protected !!