ಅದ್ಧೂರಿಯಿಲ್ಲದೆ ಡಿ ಬಾಸ್ ಹುಟ್ಟು ಹಬ್ಬ: ಫ್ಯಾನ್ಸ್ ಗೆ ಸ್ಪೆಷಲ್ ಗಿಫ್ಟ್

634

ಸ್ಯಾಂಡಲ್ ವುಡ್ ಅಂಗಳದ ಡಿ ಬಾಸ್ ಅಂದ್ರೆ ಅದು ನಟ ದರ್ಶನ. ಅಸಂಖ್ಯಾತ ಫ್ಯಾನ್ಸ್ ಫಾಲೋವರ್ಸ್ ಹೊಂದಿರುವ ನಟರಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ ಟಾಪ್ ಲಿಸ್ಟ್ ನಲ್ಲಿದ್ದಾರೆ. ಇಂದು ಇಂಥಾ ನಟನ 43ನೇ ವರ್ಷದ ಹುಟ್ಟು ಹಬ್ಬದ ಸಂಭ್ರಮ. ಚಿತ್ರರಂಗದ ಗಣ್ಯರೆಲ್ಲ ನಟ ದರ್ಶನಗೆ ಶುಭ ಕೋರಿದ್ದಾರೆ.

ಡಿ ಬಾಸ್ ಅಭಿಮಾನಿಗಳು ನಿನ್ನೆ ಮಧ್ಯರಾತ್ರಿಯೇ ಅವರ ಮನೆ ಮುಂದೆ ಜಮಾಯಿಸಿದ್ರು. ಈ ಬಾರಿ ಯಾವುದೇ ಅಬ್ಬರ ಅದ್ಧೂರಿಯಿಲ್ಲದೆ ಕೇಕ್ ಕಟ್ ಮಾಡದೆ ನಟ ದರ್ಶನ ತಮ್ಮ ಹುಟ್ಟು ಹಬ್ಬವನ್ನ ಸರಳವಾಗಿ ಆಚರಣೆ ಮಾಡಿಕೊಂಡಿದ್ದಾರೆ. ಯಾಕಂದ್ರೆ, ಹಾರ ತೂರಾಯಿ, ಕೇಕ್ ಬದಲಿಗೆ ಅಕ್ಕಿ, ಬೇಳೆ ಸೇರಿದಂತೆ ದಿನಸಿಗಳನ್ನು ತನ್ನಿ ಅದನ್ನ ನಾನು ಅನಾಥಾಶ್ರಮಕ್ಕೆ ತಲುಪಿಸುತ್ತೇನೆ ಎಂದು ತಿಂಗಳ ಹಿಂದೆಯೇ ಹೇಳಿದ್ರು. ಹೀಗಾಗಿ ಅವರ ಫ್ಯಾನ್ಸ್ ತಮ್ಮ ಕೈಲಾದ ಸಹಾಯ ಮಾಡಿದ್ದಾರೆ.

ಇನ್ನು ದರ್ಶನ ಹುಟ್ಟು ಹಬ್ಬದ ಖುಷಿಯಲ್ಲಿ ಇಂದು ಅವರ ಬಹುನಿರೀಕ್ಷಿತ ರಾಬರ್ಟ್ ಟೀಸರ್ ರಿಲೀಸ್ ಮಾಡಲಾಗಿದೆ. ಈ ಮೂಲಕ ಅಭಿಮಾನಿಗಳಿಗೆ ಖುಷಿಯ ಗಿಫ್ಟ್ ನೀಡಲಾಗಿದೆ.




Leave a Reply

Your email address will not be published. Required fields are marked *

error: Content is protected !!