ಬಿಗ್ ಬಾಸ್ ಸ್ಪರ್ಧಿ ತನಿಷಾ ವಿರುದ್ಧ ಎಫ್ಐಆರ್

324

ಪ್ರಜಾಸ್ತ್ರ ಸಿನಿಮಾ ಡೆಸ್ಕ್

ಕನ್ನಡದ ಬಿಗ್ ಬಾಸ್ ಸೀಸನ್ 10 ಹಲವು ಕಾರಣಗಳಿಂದ ವಿವಾದ ಆಗುತ್ತಿದೆ. ಹುಲಿ ಉಗುರಿನ ಲಾಕೇಟ್ ಧರಿಸಿದ್ದರು ಎನ್ನುವ ಆರೋಪದ ಮೇಲೆ ಸ್ಪರ್ಧಿ ವರ್ತೂರು ಸಂತೋಷ್ ಬಂಧನವಾಗಿತ್ತು. ನಂತರ ಅವರಿಗೆ ಜಾಮೀನು ಸಿಕ್ಕಿದೆ. ವಾಪಸ್ ಬಿಗ್ ಬಾಸ್ ಮನೆ ಸೇರಿದ್ದಾರೆ.

ಇದೀಗ ಮತ್ತೋರ್ವ ಸ್ಪರ್ಧಿ ನಟಿ ತನಿಷಾ ಕುಪ್ಪುಂಡ ವಿರುದ್ಧ ಎಫ್ಐಆರ್ ದಾಖಲಾಗಿದೆ. ಬೋವಿ ಸಮುದಾಯಕ್ಕೆ ಅವಮಾನ ಆಗುವ ರೀತಿಯಲ್ಲಿ ತನಿಷಾ ಮಾತನಾಡಿದ್ದಾರೆ ಎಂದು ಹೇಳಿ, ಅಖಿಲ ಕರ್ನಾಟಕ ಬೋವಿ ಸಮಾಜದ ಮಹಿಳಾ ಘಟಕದ ರಾಜ್ಯಾಧ್ಯಕ್ಷೆ ಪಿ.ಪದ್ಮಾ ಎಂಬುವರು ಕುಂಬಳಗೋಡು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಹೀಗೆ ಒಬ್ಬರಾದ ಮೇಲೆ ಒಬ್ಬರ ವಿರುದ್ಧ ಕೇಸ್ ದಾಖಲಾಗುತ್ತಿವೆ. ಈ ಮೂಲಕ ಕನ್ನಡದ ಬಿಗ್ ಬಾಸ್ ಸೀಸನ್ 10 ಯಾಕೋ ದಿಕ್ಕು ತಪ್ಪುತ್ತಿರುವ ಲಕ್ಷಣಗಳು ಕಾಣುತ್ತಿವೆ. ವೀಕ್ಷಕರ ಆಕ್ರೋಶದ ನಡುವೆ ಸ್ಪರ್ಧಿಗಳ ವಿರುದ್ಧ ಕೇಳಿ ಬರುತ್ತಿರುವ ಗಂಭೀರ ಆರೋಪಗಳು ಶೋ ಮೇಲೆ ಪರಿಣಾಮ ಬೀರುವುದು ಮಾತ್ರ ಪಕ್ಕಾ.




Leave a Reply

Your email address will not be published. Required fields are marked *

error: Content is protected !!