ಬೆಂಕಿ ಅನಾಹುತಕ್ಕೆ ಆಲಮೇಲದಲ್ಲಿ ಅಂಗಡಿ ಭಸ್ಮ

303

ಪ್ರಜಾಸ್ತ್ರ ಸುದ್ದಿ

ಆಲಮೇಲ: ಶಾರ್ಟ್ ಸರ್ಕ್ಯೂಟ್ ನಿಂದಾಗಿ ಬೈಕ್ ಸರ್ವಿಸ್ ಅಂಗಡಿಗೆ ಕಳೆದ ರಾತ್ರಿ ಬೆಂಕಿ ಕಾಣಿಸಿಕೊಂಡಿದೆ. ಇದರ ಪರಿಣಾಮ ಇಡೀ ಅಂಗಡಿ ಸುಟ್ಟು ಭಸ್ಮವಾಗಿದೆ. ಅಲ್ದೇ ಲಕ್ಷಾಂತರ ಮೌಲ್ಯದ ವಸ್ತುಗಳು ಹಾನಿಯಾಗಿವೆ.

ಆಲಮೇಲಪಟ್ಟಣದಲ್ಲಿ ಕಳೆದ ರಾತ್ರಿ ಈ ಘಟನೆ ನಡೆದಿದೆ‌. ದಶರಥ ಅಲೋಣಿ ಎಂಬುವವರ ಬೈಕ್ ಸರ್ವಿಸ್ ಅಂಗಡಿ ಸುಟ್ಟು ಹೋಗಿದೆ. ಇದ್ರಿಂದಾಗಿ ಸುಮಾರು 3 ಲಕ್ಷ ಮೌಲ್ಯದ ರಿಪೇರಿಗೆ ಬಂದಿರುವ ವಾಹನಗಳು ಬೆಂಕಿಗಾಹುತಿ ಆಗಿವೆ. ವಿಷಯ ತಿಳಿದ ಸ್ಥಳಕ್ಕೆ ಬಂದ ಅಗ್ನಿ ಶಾಮಕ ಸಿಬ್ಬಂದಿ ಬೆಂಕಿ ನಂದಿಸಿದ್ದಾರೆ. ಈ ಕುರಿತು ಆಲಮೇಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.




Leave a Reply

Your email address will not be published. Required fields are marked *

error: Content is protected !!