ಪಟಾಕಿ ಕಾರ್ಖಾನೆ ಸ್ಫೋಟ: 7 ಕಾರ್ಮಿಕರ ಸಾವು

430

ಪ್ರಜಾಸ್ತ್ರ ಸುದ್ದಿ

ಚೆನ್ನೈ: ಕದ್ದಲೂರು ಜಿಲ್ಲೆಯ ಪಟಾಕಿ ಕಾರ್ಖಾನೆಯೊಂದರಲ್ಲಿ ಸ್ಫೋಟ ಸಂಭವಿಸಿದ ಪರಿಣಾಮ 7 ಜನ ಕಾರ್ಮಿಕರು ಸಾವನ್ನಪ್ಪಿದ್ದಾರೆ. ನಾಲ್ವರಿಗೆ ಗಂಭೀರ ಗಾಯಗಳಾಗಿವೆ. ತಮಿಳುನಾಡು ರಾಜಧಾನಿ ಚೆನ್ನೈನಿಂದ 190 ಕಿಲೋ ಮೀಟರ್ ದೂರದಲ್ಲಿರುವ ಕಟ್ಟುಮನ್ನರ್ಕೂಯ್ಲ್ ಅನ್ನೋ ಪ್ರದೇಶದಲ್ಲಿ ಈ ಘಟನೆ ನಡೆದಿದೆ.

ಈ ಸ್ಫೋಟಕ್ಕೆ ಕಾರಣ ಏನೆಂದು ತಿಳಿದು ಬಂದಿಲ್ಲ. ಇದರ ತನಿಖೆ ನಡೆಯುತ್ತಿದೆ. ಇನ್ನು ಗಾಯಗೊಂಡವರನ್ನ ಆಸ್ಪತ್ರೆಗೆ ದಾಖಲಿಸಲಾಗಿದೆ. ಹೆಚ್ಚಿನ ಮಾಹಿತಿಯನ್ನ ಸ್ಥಳೀಯ ಪೊಲೀಸರು ಪಡೆಯುತ್ತಿದ್ದಾರೆ ಎಂದು ಎಸ್ಪಿ ಎಂ ಶ್ರೀ ಅಭಿನವ ತಿಳಿಸಿದ್ದಾರೆ.




Leave a Reply

Your email address will not be published. Required fields are marked *

error: Content is protected !!