ಹಸಿರು ಪಟಾಕಿ ‘ಸೈಲೆಂಟ್’.. ಠುಸ್ ಆಯ್ತು ಸರ್ಕಾರದ ಅಸ್ತ್ರ

224

ಪ್ರಜಾಸ್ತ್ರ ಸುದ್ದಿ

ಬೆಂಗಳೂರು: ಕೋವಿಡ್ 19 ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಪಟಾಕಿ ನಿಷೇಧ ಮಾಡಿತು. ಬಳಿಕ ಪರಿಸರ ಸ್ನೇಹಿ ಹಸಿರು ಪಟಾಕಿ ಹಾರಿಸುವುದಕ್ಕೆ ಅವಕಾಶ ನೀಡಿತು. ಆದ್ರೆ, ಇದ್ಯಾವುದಕ್ಕೂ ಕ್ಯಾರೆ ಮಾಡದ ಜನತೆ, ಎಂದಿನಂತೆ ಪಟಾಕಿ ಹಾರಿಸಿದ್ದಾರೆ.

ಪಟಾಕಿ ನಿಷೇಧವೆಂದ ಸರ್ಕಾರ, ಹಸಿರು ಪಟಾಕಿ ಮಾರಾಟಕ್ಕೆ ಅವಕಾಶ ನೀಡಿತು. ಹೀಗೆ ಅವಕಾಶ ನೀಡಿದ ಸರ್ಕಾರಕ್ಕೆ ಹಸಿರು ಪಟಾಕಿ ಹೇಗಿರುತ್ತೆ? ಹಸಿರು ಪಟಾಕಿಯಿಂದ ಸೌಂಡ್ ಬರಲ್ವಾ? ವಾಯು ಮಾಲಿನ್ಯ, ಶಬ್ಧ ಮಾಲಿನ್ಯ ಆಗಲ್ವಾ ಅನ್ನೋದೇ ಗೊತ್ತೇ ಇಲ್ಲ. ಇದನ್ನ ನೋಡಿದ್ರೆ ನೀನು ಅತ್ತಂತೆ ಮಾಡು.. ನಾನು ಚೂಟಿದಂತೆ ಮಾಡುತ್ತೇನೆ ಅನ್ನೋ ರೀತಿ, ಸರ್ಕಾರ ಹಾಗೂ ಪಟಾಕಿ ತಯಾರಿಕಾ ಕಂಪನಿಯವರ ನಾಟಕವೆಂದು ಪರಿಸರ ಪ್ರೇಮಿಗಳು ಕಿಡಿ ಕಾರಿದ್ದಾರೆ.

ಶನಿವಾರ ಮಧ್ಯಾಹ್ನದಿಂದಲೇ ಶುರುವಾದ ಪಟಾಕಿ ಹಾವಳಿ ಮಧ್ಯರಾತ್ರಿಯ ತನಕ ನಡೆದಿದೆ. ಕೋವಿಡ್ ಮುನ್ನೆಚ್ಚರಿಕೆ ಸೇರಿದಂತೆ ಯಾವುದರ ಬಗ್ಗೆ ಅಂಜಿಕೆ ಇಲ್ಲದೆ, ಸರ್ಕಾರದ ಮಾರ್ಗಸೂಚಿಗಳ ಬಗ್ಗೆ ತಲೆ ಕೆಡಿಸಿಕೊಳ್ಳದೆ ಬಿಂದಾಸ್ ಆಗಿ ಪಟಾಕಿ ಹಾರಿಸಿದ್ದು, ಸರ್ಕಾರದ ಅಸ್ತ್ರ ಠುಸ್ ಆಗಿದೆ.




Leave a Reply

Your email address will not be published. Required fields are marked *

error: Content is protected !!