ಹುಬ್ಬಳ್ಳಿಯಲ್ಲಿ‌ ಐವರು ಕತರ್ನಾಕ್ ಕಳ್ಳರ ಬಂಧನ

305

ಪ್ರಜಾಸ್ತ್ರ ಅಪರಾಧ ಸುದ್ದಿ

ಹುಬ್ಬಳ್ಳಿ: ಹುಬ್ಬಳ್ಳಿ ಧಾರವಾಡ ಅವಳಿ ನಗರದಲ್ಲಿ ದರೋಡೆ ನಡೆಸುತ್ತಿದ್ದ ಐವರು ಕತರ್ನಾಕ್ ಕಳ್ಳರನ್ನು ಬಂಧಿಸಲಾಗಿದೆ. ಎಪಿಎಂಸಿ ನವನಗರ ಠಾಣೆ ಪೊಲೀಸರು ಐವರನ್ನ ಬಂಧಿಸಿ, 79 ಸಾವಿರ ರೂಪಾಯಿ ಮೌಲ್ಯದ ಎರಡು ಬೈಕ್ ಹಾಗೂ ಮಾರಕಾಸ್ತ್ರಗಳನ್ನು ಜಪ್ತಿ ಮಾಡಿದ್ದಾರೆ.

ರಾಮಲಿಂಗೇಶ್ವರ ನಗರದ ಕುಮಾರ ರಾಮಣ್ಣ ವಡ್ಡರ(20), ತಮಿಳನಾಡಿನ‌ ಹಾಗೂ ಬೆಂಗಳೂರು ಗ್ರಾಮಾಂತರ ಮಾಗಡಿಯ ಕಿರಣ(23), ರಾಮನಗರದ ಕನಕಪುರ ತಾಲೂಕಿನ ಮಳಗಲುನ ಸಂಜೀವ(21), ಅದೇ ಜಿಲ್ಲೆಯ ದೊಡ್ಡಹಳ್ಳಿಯ ಶಿವಕುಮಾರ ಬಚ್ಚೆಗೌಡ(28) ಹಾಗೂ ಹಾಸನದ ಹೊಳೆನರಸಿಪುರ ಹಿರೆಬೆಳಗೋಲಿಯ ದೀಪಕ ಎಚ್.ಎಸ್. ಬಂಧಿತರು.‌ ಅಮರಗೋಳ ಎಪಿಎಂಸಿಯ ಯಾರ್ಡ್ ಬಳಿ ಅನುಮಾನಾಸ್ಪದವಾಗಿ ತಿರುಗುತ್ತಿದ್ದ ವೇಳೆ ನವನಗರ ಠಾಣೆ ಪೊಲೀಸರು ಇವರನ್ನು ಬಂಧಿಸಿದ್ದಾರೆ.

ಪೊಲೀಸ್ ಆಯುಕ್ತ ಲಾಬು ರಾಮ್ ಮಾರ್ಗದರ್ಶನದಲ್ಲಿ ಪಿಐ ಪ್ರಭು ಸೂರಿನ ನೇತೃತ್ವದಲ್ಲಿ ಪಿಎಸ್ಐ ಎಸ್.ಎಸ್. ಜಕ್ಕನಗೌಡ್ರ, ಎಎಸ್ಐ ಆರ್.ಎ.ಸೂಡಿ, ಸಿಬ್ಬಂದಿ ಎಂ.ಜೆ. ರಕ್ಕಸಗಿ, ಎಚ್.ಬಿ. ಬೆನಕನಹಳ್ಳಿ, ವಿಕ್ರಮ ಪಾಟೀಲ, ಎಸ್.ಎಸ್. ಮೇತ್ರಿ, ಬಿ.ಎಸ್. ರಾಥೋಡ, ಎಸ್.ಎಂ. ದಿಡ್ಡಿ ಕಾರ್ಯಚರಣೆ ನಡೆಸಿ ಆರೋಪಿಗಳನ್ನು ಬಂಧಿಸಿದ್ದಾರೆ. ತಂಡದ ಕಾರ್ಯ ಶ್ಲಾಘಿಸಿರುವ ಪೊಲೀಸ್ ಆಯುಕ್ತರು ಬಹುಮಾನ ಘೋಷಣೆ ಮಾಡಿದ್ದಾರೆ.




Leave a Reply

Your email address will not be published. Required fields are marked *

error: Content is protected !!