ಭಾರತದ ಇತಿಹಾಸದಲ್ಲೇ ಮೊದಲ ಬಾರಿಗೆ ಮಾಜಿ ಸಿಜಿಐ ರಾಜ್ಯಸಭಾ ಸದಸ್ಯ

359

ನವದೆಹಲಿ: ಸುಪ್ರೀಂ ಕೋರ್ಟ್ ಮಾಜಿ ಮುಖ್ಯ ನ್ಯಾಯಮೂರ್ತಿ ರಂಜನ ಗೊಗೊಯ್ ಅವರು ರಾಜ್ಯಸಭಾ ಸದಸ್ಯರಾಗಿ ಪ್ರಮಾಣ ಸ್ವೀಕಾರ ಮಾಡಿದ್ದಾರೆ. ರಾಷ್ಟ್ರಪತಿ ರಾಮನಾಥ ಕೋವಿಂದ ರಾಜ್ಯಸಭೆಗೆ ನಾಮಕರಣ ಮಾಡಿದ್ದಾರೆ.

ಗೃಹ ಸಚಿವಾಲಯ ಸೋಮವಾರ ರಾತ್ರಿ ಗೊಗೊಯ್ ಅವರ ಹೆಸರನ್ನ ಅನುಮೋದಿಸಿತ್ತು. ಹೀಗಾಗಿ ಸಂವಿಧಾನದ 80ನೇ ಪರಿಚ್ಛೇಧ(1)ರ ಉಪ ಷರತ್ತು (ಎ) ಅನ್ವಯ ರಾಷ್ಟ್ರಪತಿಗಳು ರಂಜನ ಗೊಗೊಯ್ ಅವರನ್ನ ನೇಮಕ ಮಾಡಿದ್ದಾರೆ. ನ್ಯಾಯಶಾಸ್ತ್ರಜ್ಞ ಕೆಟಿಎಸ್ ತುಳಿಸಿ ನಿವೃತ್ತಿ ನಂತರ ತೆರವಾಗಿದ್ದ ಸ್ಥಾನಕ್ಕೆ ಸುಪ್ರೀಂ ಕೋರ್ಟ್ ಮಾಜಿ ಮುಖ್ಯನ್ಯಾಯಮೂರ್ತಿ ಗೊಗೊಯ್ ಆಯ್ಕೆಯಾಗಿದ್ದಾರೆ.

65 ವರ್ಷದ ಗೊಗೊತ್ 13 ತಿಂಗಳ ಸುಪ್ರೀಂ ಕೋರ್ಟ್ ಮುಖ್ಯನ್ಯಾಯಮೂರ್ತಿ ಅವಧಿ ಮುಗಿಸಿ ಕಳೆದ ವರ್ಷ ನವೆಂಬರ್ ನಲ್ಲಿ ನಿವೃತ್ತಿಯಾಗಿದ್ದಾರೆ. ಸಲಿಂಗಕಾಮ, ಅಯೋಧ್ಯ ಭೂಮಿ ವಿವಾದ, ಆಸ್ಸಾಂನ ಎನ್ಆರ್ ಸಿ, ರಾಫೆಲ್ ಜೆಟ್ ಒಪ್ಪಂದ, ಶಬರಿ ಮಲೆಗೆ ಮಹಿಳೆಯರ ಪ್ರವೇಶ ಸೇರಿದಂತೆ ಪ್ರಮುಖ ವಿಷ್ಯದಲ್ಲಿ ತೀರ್ಪು ನೀಡಿದ್ದಾರೆ.

ಇನ್ನು ದೇಶದ ಇತಿಹಾಸದಲ್ಲಿಯೇ ಮೊದಲ ಬಾರಿಗೆ ಮಾಜಿ ಮುಖ್ಯನ್ಯಾಯಮೂರ್ತಿಯೊಬ್ಬರು ರಾಜ್ಯಸಭೆಗೆ ಆಯ್ಕೆ ಮಾಡಲಾಗಿದೆ. ರಾಜ್ಯಸಭೆಗೆ ರಂಜನ ಗೊಗೊಯ್ ಅವರ ಆಯ್ಕೆ ವಿಚಾರ ಬರ್ತಿದ್ದಂತೆ ದೇಶದಲ್ಲಿ ವಿರೋಧಗಳು ವ್ಯಕ್ತವಾಗಿದ್ವು. ಈ ವೇಳೆ ವಿರೋಧ ಪಕ್ಷದ ನಾಯಕರು ಸದನದಿಂದ ಹೊರ ನಡೆದಿದ್ದಾರೆ.




Leave a Reply

Your email address will not be published. Required fields are marked *

error: Content is protected !!