ಭಾರತದ ಮಾಜಿ ಫುಟ್ಬಾಲ್ ಆಟಗಾರ ಸಮರ್ ಬ್ಯಾನರ್ಜಿ ನಿಧನ

240

ಪ್ರಜಾಸ್ತ್ರ ಕ್ರೀಡಾ ಸುದ್ದಿ

ಕೊಲ್ಕತ್ತಾ: ಭಾರತದ ಮಾಜಿ ಫುಟ್ಬಾಲ್ ಆಟಗಾರ ಸಮರ್ ಬ್ಯಾನರ್ಜಿ(92) ಅವರ ನಿಧನರಾಗಿದ್ದಾರೆ. ಬದ್ರು ಎಂದೇ ಖ್ಯಾತರಾಗಿದ್ದ ಸಮರ್, 1956ರ ಬೇಸಿಗೆ ಒಲಿಂಪಿಕ್ಸ್ ನಲ್ಲಿ ಟೀಂ ಇಂಡಿಯಾದ ನಾಯಕರಾಗಿದ್ದರು.

ಕಳೆದ ಕೆಲ ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಅವರು, ಕೊಲ್ಕತ್ತಾದ ಎಸ್ಎಸ್ ಕೆಎಂ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. 7 ವರ್ಷಗಳ ಕಾಲ ಐಕಾನಿಕ್ ಮೋಗನ್ ಬಗಾನ್ ಕ್ಲಬ್ ಗಾಗಿ ಆಡಿದ್ದಾರೆ. ಜನವರಿ 30, 1930ರಲ್ಲಿ ಸಮರ್ ಬ್ಯಾನರ್ಜಿ ಜನಿಸಿದ್ದಾರೆ. ಇವರ ನಿಧನಕ್ಕೆ ಕ್ರೀಡಾ ಲೋಕದ ಗಣ್ಯರು ಸಂತಾಪ ಸೂಚಿಸಿದ್ದಾರೆ.




Leave a Reply

Your email address will not be published. Required fields are marked *

error: Content is protected !!