ಒಂಟಿ ಕಾಲಿನಲ್ಲಿ ಪುಟ್ಬಾಲ್ ಆಡುವ ಬಾಲಕ

269

ಪ್ರಜಾಸ್ತ್ರ ಸುದ್ದಿ

ಛಲವೊಂದು ಇದ್ದರೆ ಏನು ಬೇಕಾದರೂ ಮಾಡಬಹುದು. ಇದಕ್ಕೆ ಸಾಕಷ್ಟು ಉದಾಹರಣೆಗಳಿವೆ. ವಿಕಲಚೇತನರು ಸಹ ಅದೆಷ್ಟೋ ಸಾಧನೆ ಮಾಡ್ತಿದ್ದಾರೆ. ಈ ಮೂಲಕ ಇತರರಿಗೂ ಸ್ಪೂರ್ತಿಯಾಗ್ತಾರೆ. ಇದೆ ರೀತಿ ಇಲ್ಲೊಬ್ಬ ಬಾಲಕ ಪುಟಾಣಿಗಳಿಗೆ ಸ್ಪೂರ್ತಿಯಾಗಿದ್ದಾನೆ.

ಯೆಸ್, ಮಣಿಪುರದ ಇಂಪಾಲ್ ನ 9 ವರ್ಷದ ಬಾಲಕ ಕುನಾಲ್ ಪುಟ್ಬಾಲ್ ಆಡ್ತಿರುವ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಅಂಗವೈಫಲ್ಯದಿಂದ ಬಳಲುತ್ತಿರುವ ಕುನಾಲ್ ಗೆ ಒಂದು ಕಾಲು ಇಲ್ಲ ಅನ್ನೋ ಚಿಂತೆಯೇ ಇಲ್ಲ. ಕ್ರಚ್ ಹಿಡಿದುಕೊಂಡು ಪುಟ್ಬಾಲ್ ಆಡ್ತಿದ್ದಾನೆ. ಈ ಆಟ ಆತನಿಗೆ ಅತ್ಯಂತ ಖುಷಿ ನೀಡ್ತಿದೆ.

ಪ್ರಾರಂಭದಲ್ಲಿ ಕಷ್ಟ ಅನುಭವಿಸಿದ ಕುನಾಲ್ ಇದೀಗ ಸಾಮಾನ್ಯ ಮಕ್ಕಳೊಂದಿಗೆ ಸರಾಗವಾಗಿ ಪುಟ್ಬಾಲ್ ಆಡ್ತಾನೆ. ಮುಂದೊಂದು ದಿನ ಗೋಲ್ ಬಾರಿಸುತ್ತೇನೆ ಎಂದು ವಿಶ್ವಾಸದಿಂದ ಹೇಳುತ್ತಾನೆ. ಕುನಾಲ್ ಧೈರ್ಯ, ಆತ್ಮವಿಶ್ವಾಸ ಪ್ರತಿಯೊಂದು ಮಗುವಿನಲ್ಲಿ ಬರಬೇಕು.




Leave a Reply

Your email address will not be published. Required fields are marked *

error: Content is protected !!