ಮಾನವ ನಿರ್ಮಿತ ಆರ್ಥಿಕ ಬಿಕ್ಕಟ್ಟು: ಮಾಜಿ ಪ್ರಧಾನಿ

336

ನವದೆಹಲಿ: ದೇಶದ ಆರ್ಥಿಕ ಸ್ಥಿತಿ ತುಂಬಾ ಚಿಂತಾಜನಕವಾಗಿದೆ ಎಂದು ಮಾಜಿ ಪ್ರಧಾನಿ ಡಾ.ಮನಮೋಹನ ಸಿಂಗ್ ಕಳವಳ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಭಾನುವಾರ ಮತ್ನಾಡಿರುವ ಅವರು, ದ್ವೇಷ ರಾಜಕಾರಣ ಬಿಟ್ಟು, ದೇಶದ ಆರ್ಥಿಕತೆ ಸುಧಾರಣೆಯತ್ತ ಗಮನ ಹರಿಸಬೇಕೆಂದು ಪ್ರಧಾನಿ ಮೋದಿಗೆ ಹೇಳಿದ್ದಾರೆ.

ಆರ್ಥಿಕ ನೀತಿಯಲ್ಲಿ ತಪ್ಪು ನಿರ್ಧಾರಗಳೆ ಆರ್ಥಿಕ ಕುಸಿತಕ್ಕೆ ಕಾರಣವಾಗಿದೆ. ಇದು ಮಾನವ ನಿರ್ಮಿತ ಬಿಕ್ಕಟ್ಟು. ಆರ್ಥಿಕ ತಜ್ಞರ ಸಲಹೆಗಳನ್ನ ಪಡೆಯಿರಿ ಎಂದು ಪ್ರಧಾನಿ ಮೋದಿಗೆ ಸಲಹೆ ನೀಡಿದ್ದಾರೆ. ಕಳೆದ ತ್ರೈಮಾಸಿಕ ಜಿಡಿಪಿ ಬೆಳವಣಿಗೆ ಶೇಕಡ 5ರಷ್ಟು ಇದೆ. ಇದು ಆರ್ಥಿಕ ಹಿನ್ನೆಡೆಯ ಸೂಚಕವಾಗಿದೆ ಅಂತಾ ಎಚ್ಚರಿಸಿದ್ದಾರೆ.




Leave a Reply

Your email address will not be published. Required fields are marked *

error: Content is protected !!