ಪ್ರಜಾಸ್ತ್ರ ಸಿನಿಮಾ ಡೆಸ್ಕ್
ಯೋಗರಾಜ್ ಭಟ್ ನಿರ್ದೇಶನದ ಗಾಳಿಪಟ-2 ಯಶಸ್ವಿಯಾಗಿದೆ. ಗಣೇಶ್-ವೈಭವಿ ಶಾಂಡಿಲ್ಯ, ದಿಗಂತ್-ಸಂಯುಕ್ತಾ ಮೆನನ್, ಪವನ್-ಶರ್ಮಿಳಾ ಮಾಂಡ್ರೆ ಜೋಡಿಯಾಗಿ ಕಾಣಿಸಿಕೊಂಡಿದ್ದಾರೆ. ಈ ಜೋಡಿಯ ಸಿನಿಮಾ ಸಕಸ್ಸ್ ಆಗಿದೆ. ಇದೀಗ ಈ ಚಿತ್ರದ ತತ್ತೇರಿಕೆ ಅನ್ನೋ ಹಾಡು ರಿಲೀಸ್ ಮಾಡಲಾಗಿದೆ.
ಯೆಸ್, ದಿಗಂತ್ ಹಾಗೂ ಸಂಯುಕ್ತಾ ಮೆನನ್ ಜೋಡಿ ಹಾಡನ್ನು ಸೆಪ್ಟೆಂಬರ್ 19ರಂದು ಬಿಡುಗಡೆ ಮಾಡಲಾಗಿದೆ. ದಿಗಂತ್, ತನ್ನ ಹುಡುಗಿಗೆ ಕಾಡಿಸುವ ಹಾಡು ಇದಾಗಿದೆ. ಇದಕ್ಕೆ ನೋಡುಗರಿಂದ ಮಿಶ್ರ ಪತ್ರಿಕ್ರಿಯೆ ವ್ಯಕ್ತವಾಗುತ್ತಿದೆ. ಕೆಲವರು ಚೆನ್ನಾಗಿದೆ ಸಿನಿಮಾದಿಂದ ಯಾಕೆ ತೆಗೆದರಿ ಅಂದರೆ, ಮತ್ತೆ ಕೆಲವರು ಈ ಹಾಡು ಸಿನಿಮಾದಲ್ಲಿ ಇಲ್ಲದೆ ಇರೋದು ಬೆಸ್ಟ್ ಎಂದಿದ್ದಾರೆ.