‘ಎಡಗೈ ಅಪಘಾತಕ್ಕೆ ಕಾರಣ’ ಎನ್ನುತ್ತಿರುವ ದಿಗಂತ್

167

ಪ್ರಜಾಸ್ತ್ರ ಸಿನಿಮಾ ಡೆಸ್ಕ್

ಗಾಳಿಪಟ-2 ಚಿತ್ರದ ಸಕಸ್ಸ್ ನಲ್ಲಿರುವ ನಟ ದಿಗಂತ್, ಇದೀಗ ಮತ್ತೊಂದು ಹೊಸ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಅದುವೆ ‘ಎಡಗೈ ಅಪಘಾತಕ್ಕೆ ಕಾರಣ’ ಅನ್ನೋ ವಿಭಿನ್ನ ಟೈಟಲ್ ಹೊಂದಿದ ಚಿತ್ರ. ಇದೊಂದು ಸಸ್ಪೆನ್ಸ್ ಥ್ರಿಲ್ಲರ್ ಮೂವಿ ಎನ್ನಲಾಗುತ್ತಿದೆ.

ಸಮರ್ಥ್ ಬಿ ಕಡ್ಕೋಲ್ ನಿರ್ದೇಶನ ಮಾಡುತ್ತಿದ್ದು, ಗುರುದತ್ತ ಗಾಣಿಗ ಹಾಗೂ ಸಮರ್ಥ್ ಜೊತೆಗೆ ನಿರ್ಮಾಣ ಮಾಡುತ್ತಿದ್ದಾರೆ. ತುಂಬಾ ಡಿಫರೆಂಟ್ ಟೈಟಲ್ ಹೊಂದಿರುವ ಚಿತ್ರದಲ್ಲಿ ಏನು ಕಥೆ ಇರಬಹುದು ಅನ್ನೋ ಕುತೂಹಲ ಮೂಡಿದೆ.

ದಿಗಂತ್ ಗೆ ಜೋಡಿಯಾಗಿ ಯುವ ನಟಿ ಧನು ಹರ್ಷ ಕಾಣಿಸಿಕೊಳ್ಳುತ್ತಿದ್ದಾರೆ. ಬೆಂಗಳೂರು ಸೇರಿದಂತೆ ಅನೇಕ ಕಡೆ ಶೂಟಿಂಗ್ ಪ್ಲಾನ್ ಮಾಡಿಕೊಂಡಿದ್ದು, ಅಭಿಮನ್ಯ ಸದಾನಂದ್ ಕ್ಯಾಮೆರಾ ವರ್ಕ್ ಇದೆ.




Leave a Reply

Your email address will not be published. Required fields are marked *

error: Content is protected !!