ರಾಕ್ಷಸನ ಕಥೆ ಹೇಳಲು ರಮೇಶ್ ಅರವಿಂದ್ ರೆಡಿ

229

ಪ್ರಜಾಸ್ತ್ರ ಸುದ್ದಿ

ಸ್ಯಾಂಡಲ್ ವುಡ್ ಸ್ಟಾರ್ ನಟ ರಮೇಶ್ ಅರವಿಂದ್ ಅವರಿಗೆ ಇಂದು 58ರ ಹುಟ್ಟು ಹಬ್ಬದ ಸಂಭ್ರಮ. ಹೀಗಾಗಿ ಚಿತ್ರರಂಗದ ಮಂದಿ ಸೇರಿದಂತೆ ಅಭಿಮಾನಿಗಳು, ಬಂಧು ಬಳಗದವರು ಶುಭ ಕೋರುತ್ತಿದ್ದಾರೆ. ಇನ್ನು ಸಿನಿಮಾ ತಾರೆಯರ ಹುಟ್ಟು ಹಬ್ಬ ಅಂದರೆ, ಅವರ ಹೊಸ ಚಿತ್ರದ ಕುರಿತು ಒಂದಲ್ಲ ಒಂದು ವಿಷಯ ಇರಲೇಬೇಕು.

ಯೆಸ್, ನಟ ರಮೇಶ್ ಅರವಿಂದ್ ಅವರ ಶಿವಾಜಿ ಸುರತ್ಕಲ್-2 ಚಿತ್ರದ ಟೀಸರ್ ಔಟ್ ಆಗಿದೆ. ಕಳೆದ ವರ್ಷದ ರಿಲೀಸ್ ಆದ ಶಿವಾಜಿ ಸುರತ್ಕಲ್ ಸಕ್ಸಸ್ ಬಳಿಕ ಅದರ ಮುಂದುವರೆದ ಭಾಗ ಬರುತ್ತಿದೆ. ನಮ್ಮ ಸುತ್ತ, ನಮ್ಮ ಜೊತೆ ಇರುವ ರಾಕ್ಷಸರ ಜೊತೆಗೆ ನಮ್ಮೊಳಗಿರುವ ರಾಕ್ಷಸನ ಕಥೆ ಹೇಳಲು ಬರುತ್ತಿದ್ದಾರೆ.

ಸಸ್ಪೆನ್ಸ್ ಥ್ರಿಲ್ಲರ್ ಮೂವಿ ಇದಾಗಿದ್ದು, ಟೀಸರ್ ಮೂಲಕ ಮತ್ತಷ್ಟು ಕುತೂಹಲ ಮೂಡಿಸಲಾಗಿದೆ. ಚಿತ್ರದಲ್ಲಿ ಮೇಘಾ ಗಾಂವ್ಕರ್, ಶೋಭರಾಜ್, ನಾಸಿರ್, ರಾಧಿಕಾ ನಾರಾಯಣ್, ರಮೇಶ್ ಭಟ್, ವಿನಾಯಕ್ ಜೋಶಿ ಸೇರಿದಂತೆ ಬಹುದೊಡ್ಡ ತಾರಾ ಬಳಗವಿದೆ.




Leave a Reply

Your email address will not be published. Required fields are marked *

error: Content is protected !!