ಮತ್ತೊಂದು ಥ್ರಿಲ್ಲರ್ ಕಥೆ ಹೇಳಲು ರಮೇಶ್ ರೆಡಿ

207

ಪ್ರಜಾಸ್ತ್ರ ಸಿನಿಮಾ ಡೆಸ್ಕ್

ಸ್ಯಾಂಡಲ್ ವುಡ್ ತ್ಯಾಗರಾಜ, ನಟ ರಮೇಶ್ ಅರವಿಂದ್ ಅವರು ಇಂದು ತಮ್ಮ 59ನೇ ಹುಟ್ಟು ಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ. ಈ ಶುಭ ಸಂದರ್ಭದಲ್ಲಿ ತಮ್ಮ ಮುಂದಿನ ಚಿತ್ರದ ಟೈಟಲ್ ರಿವೀಲ್ ಮಾಡಿದ್ದಾರೆ.

ದೈಜಿ ಅನ್ನೋ ಸಿನಿಮಾದೊಂದಿಗೆ ಮತ್ತೊಂದು ಸಸ್ಪೆನ್ಸ್ ಥ್ರಿಲ್ಲರ್ ಕಥೆ ಹೇಳಲು ನಟ ರಮೇಶ್ ಅರವಿಂದ್ ಬರುತ್ತಿದ್ದಾರೆ. ಶಿವಾಜಿ ಸುರತ್ಕಲ್-1 ಹಾಗೂ 2 ಹಿಟ್ ಚಿತ್ರದ ಬಳಿಕ ನಿರ್ದೇಶಕ ಆಕಾಶ್ ಶ್ರೀವತ್ಸ ಹಾಗೂ ರಮೇಶ್ ಮತ್ತೆ ಒಂದಾಗುತ್ತಿದ್ದಾರೆ. ವಿಭಾ ಕಶ್ಯಪ್ ಬ್ಯಾನರ್ ಅಡಿಯಲ್ಲಿ ರವಿ ಕಶ್ಯಪ್ ಈ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ.

ದೈಜಿ ಅನ್ನೋ ಟೈಟಲ್ ಹಾಗೂ ಪೋಸ್ಟರ್ ಭಾರೀ ಕುತೂಹಲ ಮೂಡಿಸಿದೆ. ಕೊಂಕಣಿಯಲ್ಲಿ ದೈಜಿ ಅಂದರೆ ರಕ್ತ ಸಂಬಂಧ, ಜಪಾನಿ ಭಾಷೆಯಲ್ಲಿ ಕಾಳಜಿ ವಹಿಸಬೇಕಾದ ವಿಚಾರ. ಹೀಗೆ ಹಲವು ಅರ್ಥ ನೀಡುವ ಚಿತ್ರದ ಟೈಟಲ್ ಮೂಲಕ ರೋಚಕ ಕಥೆಯೊಂದು ಹೇಳುವುದು ಪಕ್ಕಾ ಆಗಿದೆ.




Leave a Reply

Your email address will not be published. Required fields are marked *

error: Content is protected !!