ಪ್ರಜಾಸ್ತ್ರ ಸಿನಿಮಾ ಡೆಸ್ಕ್
ಬೆಂಗಳೂರು: ಸ್ಯಾಂಡಲ್ ವುಡ್ ನಟ, ನಿರ್ದೇಶಕ ರಮೇಶ್ ಅರವಿಂದ್ ಹಾಗೂ ನಟಿ ರಚಿತಾ ರಾಮ್ ಜೋಡಿಯ 100 ಚಿತ್ರದ ಟ್ರೇಲರ್ ರಿಲೀಸ್ ಮಾಡಲಾಗಿದೆ. ಆನಂದ್ ಆಡಿಯೋ ಯುಟ್ಯೂಬ್ ಚಾನೆಲ್ ನಲ್ಲಿ ಇಂದು ಟ್ರೇಲರ್ ರಿಲೀಸ್ ಮಾಡಲಾಗಿದೆ.
ಈ ಚಿತ್ರವನ್ನು ರಮೇಶ್ ಅರವಿಂದ್ ಅವರೆ ನಿರ್ದೇಶನ ಮಾಡಿದ್ದಾರೆ. ಸಸ್ಪೆನ್ಸ್, ಥ್ರಿಲ್ಲರ್ ಮೂವಿ ಇದಾಗಿದ್ದು ಜನರಿಗೆ ಕುತೂಹಲ ಮೂಡಿಸಿದೆ. ಪ್ರಕಾಶ್ ಬೆಳವಾಡಿ, ಶೋಭರಾಜ್, ಬೇಬಿ ಸ್ಮಯಾ, ರಾಜು ತಾಳಿಕೋಟೆ ಸೇರಿದಂತೆ ಅನೇಕರು ಕಾಣಿಸಿಕೊಂಡಿದ್ದಾರೆ.
ರವಿ ಬಸ್ರೂರ್ ಅವರ ಸಂಗೀತ ಸಂಯೋಜೆ ಭರ್ಜರಿಯಾಗಿದೆ. ನವೆಂಬರ್ 19 100 ಚಿತ್ರ ಎಲ್ಲೆಡೆ ಭರ್ಜರಿಯಾಗಿ ಬಿಡುಗಡೆಯಾಗಲಿದೆ.