ಪ್ರಜಾಸ್ತ್ರ ಸಿನಿಮಾ ಡೆಸ್ಕ್
ಜೋಗಿ ಪ್ರೇಮ್ ನಿರ್ದೇಶನ ಮಾಡುತ್ತಿರುವ, ಆಕ್ಷನ್ ಪ್ರಿನ್ಸ್ ಧ್ರುವ್ ಸರ್ಜಾ ನಟನೆಯ ಕೆಡಿ ಚಿತ್ರಕ್ಕೆ ಸ್ಯಾಂಡಲ್ ವುಡ್ ತ್ಯಾಗರಾಜ ಅಂತಾನೆ ಕರೆಸಿಕೊಳ್ಳುವ ನಟ ರಮೇಶ್ ಅರವಿಂದ್ ಎಂಟ್ರಿಯಾಗಿದೆ. ತುಂಬಾ ವಿಭಿನ್ನ ಗೆಟಪ್ ನಲ್ಲಿ ರಮೇಶ್ ಅರವಿಂದ್ ಕಾಣಿಸಿಕೊಂಡಿದ್ದು, ಕನ್ನಡ ರಾಜ್ಯೋತ್ಸವದಂದು ಪೋಸ್ಟರ್ ರಿಲೀಸ್ ಮಾಡಲಾಗಿದೆ.
ಧರ್ಮ ಪಾತ್ರದ ಮೂಲಕ ಕೆಡಿ ಅಖಾಡಕ್ಕೆ ಎಂಟ್ರಿ ಕೊಟ್ಟಿದ್ದಾರೆ. ಪ್ಯಾನ್ ಇಂಡಿಯಾ ಲೆವಲ್ ನಲ್ಲಿ ಸಿನಿಮಾ ಮಾಡಲಾಗುತ್ತಿದೆ. ಇದರಲ್ಲಿ ಬಾಲಿವುಡ್ ನಟ ಸಂಜಯ್ ದತ್, ನಟಿ ಶಿಲ್ಪಿ ಶೆಟ್ಟಿ, ಸ್ಯಾಂಡಲ್ ವುಡ್ ಕ್ರೇಜಿ ಸ್ಟಾರ್ ರವಿಚಂದ್ರನ್ ಹಾಗೂ ಮಲಯಾಳಂನ ಇಬ್ಬರು ಸ್ಟಾರ್ ನಟರು ಕಾಣಿಸಿಕೊಳ್ಳುತ್ತಿದ್ದಾರೆ.
ಜೋಗಿ ಪ್ರೇಮ್ ಚಿತ್ರ ಎಂದರೆ ಸಾಕಷ್ಟು ನಿರೀಕ್ಷೆ ಇರುತ್ತೆ. ಸೆಂಟಿಮೆಂಟ್ ಜೊತೆಗೆ ಆಕ್ಷನ್ ಧಮಾಕ್ ಇರುತ್ತೆ. ಕೆವಿಎನ್ ಪ್ರೊಡಕ್ಷನ್ ಕೆಡಿ ಚಿತ್ರ ನಿರ್ಮಾಣ ಮಾಡುತ್ತಿದೆ. ಮತ್ತಷ್ಟು ಅಪ್ ಡೇಟ್ ಶೀಘ್ರದಲ್ಲಿ ನೀಡಲಿದೆ.