ಹಾಸನಾಂಬೆ ದರ್ಶನ ಶುರು

166

ಪ್ರಜಾಸ್ತ್ರ ಸುದ್ದಿ

ಹಾಸನ: ಪ್ರಸಿದ್ಧ ಹಾಸನಾಂಬೆ ದೇವಿಯ ದರ್ಶನ ಇಂದಿನಿಂದ ಪ್ರಾರಂಭವಾಗಿದೆ. ಮಧ್ಯಾಹ್ನ 12 ಗಂಟೆಗೆ ದರ್ಶನ ಪ್ರಾರಂಭವಾಗಿದೆ. ನವೆಂಬರ್ 15ರ ತನಕ ಭಕ್ತರಿಗೆ ತಾಯಿಯ ದರ್ಶನ ಸಿಗಲಿದೆ. ವರ್ಷಕ್ಕೊಮ್ಮೆ ಈ ದೇವಸ್ಥಾನದ ಬಾಗಿಲು ತೆಗೆಯಲಾಗುತ್ತೆ.

ಈಗಾಗ್ಲೇ ದೇವಸ್ಥಾನ ಮಂಡಳಿ, ಜಿಲ್ಲಾಡಳಿತ, ಪೊಲಿಸ್ ಇಲಾಖೆಯಿಂದ ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ. 10 ಲಕ್ಷ ಭಕ್ತರು ದರ್ಶನ ಪಡೆಯುವ ನಿರೀಕ್ಷೆಯಿದೆ. ಹೀಗಾಗಿ ಎಲ್ಲೆಡೆ ಸೂಕ್ತ ಬಂದೋಬಸ್ತ್ ಮಾಡಲಾಗಿದೆ. 8 ಕಡೆ ಸ್ವಾಗತ ಕಮಾನ್, ಸಿಸಿಟಿವಿ ಅಳವಡಿಸಲಾಗಿದೆ.

ದೇವಸ್ಥಾನದ ಸುತ್ತಮುತ್ತ ಸಾರ್ವಜನಿಕರ ಚಲನವಲನ ಗಮನಿಸಲು ಒಂದು ಕಡೆ ಸಿಸಿಟಿವಿ, ಮತ್ತೊಂದು ಕಡೆ 1,200 ಪೊಲೀಸರು ಕರ್ತವ್ಯ ನಿರ್ವಹಿಸಲಿದ್ದಾರೆ. ಕಂಟ್ರೋಲ್ ರೂಂ ಸಹ ತೆರೆಯಲಾಗಿದೆ. ಒಟ್ಟಿನಲ್ಲಿ ಯಾವುದೇ ರೀತಿಯ ಅಹಿತಕರ ಘಟನೆಗಳು ನಡೆಯದಂತೆ ಸಿದ್ಧತೆ ಮಾಡಿಕೊಳ್ಳಲಾಗಿದೆ.




Leave a Reply

Your email address will not be published. Required fields are marked *

error: Content is protected !!