ರಾಬರ್ಟ್ ದೌನೇ ಸಂಭಾವನೆಯಲ್ಲೇ ನಮ್ಮಲ್ಲಿ 10 ಸಿನ್ಮಾ ಮಾಡಬಹುದು

496

ಪ್ರಜಾಸ್ತ್ರ ಸಿನಿಮಾ ಡೆಸ್ಕ್

ಹಾಲಿವುಡ್ ನಟ, ನಟಿಯರ ಕಾಲ್ ಶೀಟ್ ಲೆಕ್ಕ ಕೇಳಿದ್ರೆ ತಲೆ ಗಿರಗಿರ ತಿರುಗುತ್ತೆ. ಯಾಕಂದ್ರೆ, ಸಾವಿರಾರು ಕೋಟಿ ರೂಪಾಯಿ ಬಂಡಾವಳ ಹೂಡಿ ಮಾಡುವ ಚಿತ್ರದಲ್ಲಿನ ನಟ, ನಟಿಯರಿಗೆ ನೂರಾರು ಕೋಟಿ ರೂಪಾಯಿ ಕೊಡ್ತಾರೆ. ಅದರಲ್ಲಿ ರಾಬರ್ಟ್ ದೌನೇ ಜೂನಿಯರ್ ಸಹ ಒಬ್ಬ.

ಇದೀಗ ಈ ಸಂಭಾವನೆ ವಿಚಾರವೇ ಭರ್ಜರಿ ಚರ್ಚೆಯಾಗ್ತಿದೆ. ಅದು ಹಾಲಿವುಡ್ ನಟ ರಾಬರ್ಟ್ ದೌನೇ ಜೂನಿಯರ್ ಪಡೆದ ಸಂಭಾವನೆಯಲ್ಲಿ ನಮ್ಮಲ್ಲಿ ಸುಮಾರು 10 ಚಿತ್ರ ಮಾಡಬಹುದು. ಹೈ ಬಜೆಟ್ ಮೂವಿ ಅಂದ್ರೂ ಎರಡ್ಮೂರು ಸಿನಿಮಾ ಮಾಡಬಹುದು. ಯೆಸ್, ಜಾನ್ ವಾಟ್ಸ್ ನಿರ್ದೇಶನದ ಸ್ಪೈಡರ್ ಮ್ಯಾನ್ ಹೋಂ ಕಮ್ಮಿಂಗ್ ಚಿತ್ರ ಭರ್ಜರಿ ಸೌಂಡ್ ಮಾಡಿ ಸಾವಿರಾರು ಕೋಟಿ ಗಳಿಕೆ ಮಾಡಿತು.

ಟಾಮ್ ಹೋಲ್ಯಾಂಡ್ ಸ್ಪೈಡರ್ ಮ್ಯಾನ್ ಆಗಿ ಕಾಣಿಸಿಕೊಂಡ. ಇವನ ವಿರುದ್ಧ ಐರನ್ ಮ್ಯಾನ್ ಆಗಿ ರಾಬರ್ಟ್ ದೌನೇ ಕಾಣಿಸಿಕೊಂಡಿದ್ದ. ಅದು ಗೆಸ್ಟ್ ಅಪಿಯರೆನ್ಸ್ ಆಗಿತ್ತು. ಹೀಗಾಗಿ ಮೂರು ದಿನಗಳ ಶೂಟಿಂಗ್ ಗೆ ರಾಬರ್ಟ್ ದೌನೇ ಪಡೆದಿದ್ದು 15 ಮಿಲಿಯನ್ ಡಾಲರ್. ಅಂದ್ರೆ ಬರೋಬ್ಬರಿ 100 ಕೋಟಿ ರೂಪಾಯಿ. ಇದನ್ನ ಮೂರು ದಿನ.. 15 ಮಿಲಿಯನ್ ಡಾಲರ್ ನ್ನ ನಿಮಿಷಕ್ಕೆ ಲೆಕ್ಕ ಹಾಕಿದ್ರೆ 15 ಲಕ್ಷ ರೂಪಾಯಿ ಸಂಭಾವನೆ. ಇದನ್ನ ಕೇಳಿದವರು ರಾಬರ್ಟ್ ದೌನೇ ಜೂನಿಯರ್ ಇಷ್ಟೊಂದು ದುಬಾರಿ ನಟನಾ ಎಂದು ಕಣ್ ಕಣ್ ಬಿಡ್ತಿದ್ದಾರೆ.




Leave a Reply

Your email address will not be published. Required fields are marked *

error: Content is protected !!