ಸಬರಮತಿ ಆಶ್ರಮದತ್ತ ಟ್ರಂಪ್ ದಂಪತಿ

296

ಅಹಮದಾಬಾದ್: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭಾರತಕ್ಕೆ ಆಗಮಿಸಿದ್ದಾರೆ. ಪ್ರಧಾನಿ ಮೋದಿ ಟ್ರಂಪ್ ದಂಪತಿಯನ್ನ ಅದ್ಧೂರಿಯಾಗಿ ಸ್ವಾಗತಿಸಿದ್ದಾರೆ. ಶಿಷ್ಟಾಚಾರ ಮುರಿದು ಪ್ರಧಾನಿ ವಿಮಾನ ನಿಲ್ದಾಣಕ್ಕೆ ತೆರಳಿ ಅಮೆರಿಕ ಅಧ್ಯಕ್ಷರನ್ನ ಸ್ವಾಗತಿಸಿದ್ದಾರೆ.

ಸರ್ಧಾರ್ ವಲ್ಲಾಭಾಯ್ ಪಟೇಲ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಸುಮಾರು 22 ಕಿಲೋ ಮೀಟರ್ ರೋಡ್ ಶೋ ಮಾಡುವ ಮೂಲಕ ಸಬರಮತಿ ಆಶ್ರಮದತ್ತ ಹೊರಟಿದ್ದಾರೆ. ರಸ್ತೆಯುದ್ದಕ್ಕೂ ಸಾಂಸ್ಕೃತಿಕ ತಂಡಗಳು ಅದ್ಧೂರಿಯಾಗಿ ಸ್ವಾಗತ ಕೋರಿವೆ.

60 ಸಾವಿರ ಬಾವುಟ ಹಾರಿಸಿದ ಮಕ್ಕಳು, 28 ವೇದಿಕೆಗಳಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ. 600 ಕ್ಕೂ ಹೆಚ್ಚು ಕಲಾ ತಂಡಗಳಿಂದ ಕಾರ್ಯಕ್ರಮ ನಡೆಯಲಿದೆ. ಜಪಾನ್ ಹಾಗೂ ಚೀನಾ ಅಧ್ಯಕ್ಷರ ಬಳಿಕ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸಬರಾಮತಿ ಆಶ್ರಮಕ್ಕೆ ಭೇಟಿ ನೀಡ್ತಿದ್ದಾರೆ. ಇದಾದ ಬಳಿಕ ಮೊಟೆರಾ ಸ್ಟೇಡಿಯಂ ಉದ್ಘಾಟನೆ ಮಾಡುವ ಮೂಲಕ ಇಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳು ಅನಾವರಣಗೊಳ್ಳಲಿವೆ.

ಇತ್ತೀಚೆಗಷ್ಟೇ ಪ್ರಧಾನಿ ಮೋದಿ ಹೋಸ್ಟನ್ ಗೆ ಹೋದಾಗ ಹೌಡಿ ಮೋದಿ ಅನ್ನೋ ಬೃಹತ್ ಕಾರ್ಯಕ್ರಮ ಆಯೋಜಿಸಲಾಗಿತ್ತು. ಅದೇ ರೀತಿ ಇದೀಗ ‘ನಮಸ್ತೆ ಟ್ರಂಪ್’ ಅನ್ನೋ ಬೃಹತ್ ಕಾರ್ಯಕ್ರಮದ ಮೂಲಕ ಟ್ರಂಪ್ ಗೆ ವಿಭಿನ್ನವಾಗ ಸ್ವಾಗತಿಸಲಾಗಿದೆ. ಇದರ ಜೊತೆಗೆ ಎರಡು ದಿನಗಳ ಪ್ರವಾಸದಲ್ಲಿ ದ್ವೀಪಕ್ಷೀಯ ಮಾತುಕತೆಗಳು ನಡೆಯಲಿವೆ.




Leave a Reply

Your email address will not be published. Required fields are marked *

error: Content is protected !!