ಬೆಂಗಳೂರಿನಲ್ಲಿ ಕಸಕ್ಕೂ ಸೆಸ್?

217

ಪ್ರಜಾಸ್ತ್ರ ಸುದ್ದಿ

ಬೆಂಗಳೂರು: ಸಿಲಿಕಾನ್ ಸಿಟಿ ದಿನಗಳು ಕಳೆದಂತೆ ದೇಶದಲ್ಲಿಯೇ ಅತಿ ದುಬಾರಿ ನಗರವಾಗಿ ಬದಲಾಗುತ್ತಿದೆ. ಇಲ್ಲಿ ಪ್ರತಿಯೊಂದಕ್ಕೂ ತೆರಿಗೆ ಹಾಗೂ ದಂಡ ಕಟ್ಟುವ ಪರಿಸ್ಥಿತಿ ನಿರ್ಮಾಣ ಮಾಡಲಾಗುತ್ತಿದೆ. ಇದರಿಂದಾಗಿ ಜನಸಾಮಾನ್ಯರು ಬದುಕು ನಿರ್ವಹಿಸುವುದೇ ದೊಡ್ಡ ಸಮಸ್ಯೆಯಾಗಿದೆ. ಈಗ ಕಸಕ್ಕೂ ಸೆಸ್ ಹಾಕಲು ಬಿಬಿಎಂಪಿ ಹೊರಟಿದೆ ಅನ್ನೋ ಚರ್ಚೆ ಶುರುವಾಗಿದೆ.

ಪ್ರತಿ ತಿಂಗಳು ಬರುವ ವಿದ್ಯುತ್ ಬಿಲ್ ಜೊತೆಗೆ ಕಸದ ಸೆಸ್ ಅದರಲ್ಲಿ ಸೇರಿಸಬೇಕು ಅನ್ನೋ ಚರ್ಚೆ ನಡೆದಿದ್ದು, ಇದರಿಂದ ಪಾಲಿಕೆ ಆದಾಯ ಹೆಚ್ಚಲಿದೆ ಎಂದು ಹೇಳಲಾಗುತ್ತಿದೆಯಂತೆ. ಇದರಲ್ಲಿ ಗೃಹ ಹಾಗೂ ವಾಣಿಜ್ಯ ಕಟ್ಟಡಗಳ ತಾಜ್ಯ ಸಂಗ್ರಹಕ್ಕೆ ಬೇರೆ ಬೇರೆ ಸೆಸ್ ವಿಧಿಸುವ ಕುರಿತು ಚಿಂತನೆ ಇದೆಯಂತೆ.

200 ರೂಪಾಯಿ ವಿದ್ಯುತ್ ಬಿಲ್ ಕಟ್ಟುವವರು 30 ರೂಪಾಯಿ, 200-500 ರೂಪಾಯಿ ಕಟ್ಟುವವರು 60 ರೂಪಾಯಿ, 500-1000 ಸಾವಿರ ರೂಪಾಯಿ ಕಟ್ಟುವವರು 100 ರೂಪಾಯಿ, 3 ಸಾವಿರಕ್ಕಿಂತ ಹೆಚ್ಚು ಬಿಲ್ ಕಟ್ಟುವವರು 500 ರೂಪಾಯಿವರೆಗೂ ಕಸದ ಸೆಸ್ ಹಾಕಲು ಬಿಬಿಎಂಪಿ ಚಿಂತಿಸಿದೆಯಂತೆ. ಬೆಂಗಳೂರು ನಗರಾಭಿವೃದ್ಧಿ ಖಾತೆ ಸಿಎಂ ಬೊಮ್ಮಾಯಿ ಬಳಿ ಇರುವುದರಿಂದ ಅವರು ಏನು ತೀರ್ಮಾನ ತೆಗೆದುಕೊಳ್ಳುತ್ತಾರೆ ನೋಡಬೇಕಿದೆ.

ಏಪ್ರಿಲ್ ಹಾಗೂ ಮೇನಲ್ಲಿ ಬಿಬಿಎಂಪಿ ಚುನಾವಣೆ ಇರುವುದರಿಂದ ಜನರ ಮೇಲೆ ಹೊರೆ ಹಾಕಿದರೆ ಪೆಟ್ಟ ಬೀಳಬಹುದು ಎಂದು ಸಧ್ಯಕ್ಕೆ ಸುಮ್ಮನಿರಬಹುದು. ಆದರೆ, ಮುಂದೆ ಕಸದ ಮೇಲೆ ಸೆಸ್ ಹಾಕಿದರೂ ಅಚ್ಚರಿ ಪಡಬೇಕಿಲ್ಲ. ಒಟ್ಟಿನಲ್ಲಿ ಜನಸಾಮಾನ್ಯರು ಬೆಂಗಳೂರಿನಲ್ಲಿ ಬದುಕುವುದು ಬಲು ಕಷ್ಟ.




Leave a Reply

Your email address will not be published. Required fields are marked *

error: Content is protected !!