ಧರೆಗುರುಳಿದ ಏಕತಾ ಪ್ರತಿಮೆ ಬಳಿಯ ಡೈನಸಾರ್

421

ಅಹ್ಮದಾಬಾದ್: ಗುಜರಾತನ ನರ್ಮದಾ ನದಿ ತಟ್ಟದಲ್ಲಿ ನಿರ್ಮಿಸಲಾಗಿರುವ ಸರ್ದಾರ್ ವಲ್ಲಭಾಯ್ ಪಟೇಲ ಏಕತಾ ಮೂರ್ತಿ ಸಮೀಪದ ಡೈನಸಾರ್ ಪ್ರತಿಮೆ ಧರೆಗುರುಳಿದೆ. 30 ಅಡಿ ಎತ್ತರದ ಡೈನಸಾರ್ ಪ್ರತಿಮೆ ಉರುಳಿ ಬದಿದ್ದು, ಅದೃಷ್ಟವಶಾತ್ ಯಾವುದೇ ಸಾವು ನೋವು ಸಂಭವಿಸಿಲ್ಲ.

ಈ ಘಟನೆ ಬಳಿಕ ಇದೀಗ ಇದನ್ನ ನಿರ್ಮಿಸಿದ ಗುತ್ತಿಗೆದಾರನ ಕೆಲಸದ ಬಗ್ಗೆ ಪ್ರಶ್ನೆಗಳು ಹುಟ್ಟಿಕೊಂಡಿವೆ. 2 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಿಸಿದ್ದ ಪ್ರತಿಮೆಯನ್ನ ಪೇಟಲರ 182 ಮೀಟರ್ ಎತ್ತರದ ಪ್ರತಿಮೆ ಹತ್ತಿರವೇ ಇತ್ತು. ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡುವ ದೃಷ್ಟಿಯಿಂದ ಗುಜರಾತ್ ಸರ್ಕಾರ ಇದನ್ನ ನಿರ್ಮಿಸಿತ್ತು. ಇದೀಗ ಯೋಜನೆಯ ಬಗ್ಗೆ ಹಲವು ಅನುಮಾನಗಳು ಮೂಡಿವೆ.




Leave a Reply

Your email address will not be published. Required fields are marked *

error: Content is protected !!