ವಿಕ್ರಮ್ ಸೇಫ್ ಆಗಿದೆ

394

ಬೆಂಗಳೂರು: ಚಂದ್ರಯಾನ-2 ಸಕ್ಸಸ್ ಆಗುವ ಕೊನೆಯ ಹಂತದಲ್ಲಿ ಸ್ವಲ್ಪ ಹಿನ್ನೆಡೆಯಾಯ್ತು. ಇದೀಗ ಖುಷಿಯ ಸಂಗತಿ ಅಂದ್ರೆ, ಲ್ಯಾಂಡರ್ ವಿಕ್ರಮ್ ಸುಸ್ಥಿತಿಯಲ್ಲಿದೆ ಅನ್ನೋದು. ಈ ಬಗ್ಗೆ ಇಸ್ರೋ ಮೂಲಗಳು ತಿಳಿಸಿವೆ. ಲ್ಯಾಂಡರ್ ವಿಕ್ರಮ್ ಎಲ್ಲಿದೆ ಅನ್ನೋದರ ಮಾಹಿತಿ ಸಿಕ್ಕಿದ್ದು, ಅದರ ಜೊತೆಗೆ ಆದಷ್ಟು ಬೇಗ ಸಂಪರ್ಕ ಸಾಧಿಸುವ ಕೆಲಸ ಮಾಡುತ್ತೇವೆ ಎಂದು ಇಸ್ರೋ ತಿಳಿಸಿದೆ.

ಸೆಪ್ಟೆಂಬರ್ 7ರ ಬೆಳಗ್ಗೆ 1.50ರ ಟೈಂನಲ್ಲಿ ಸಂಪರ್ಕಕ್ಕೆ ಸಿಗಬೇಕಿದ್ದ ಲ್ಯಾಂಡರ್ ವಿಕ್ರಮ್, ಗುರಿ ತಲುಪಲು ಜಸ್ಟ್ 2.1 ಕಿಲೋ ಮೀಟರ್ ಇರುವಾಗ್ಲೇ ಸಂಪರ್ಕ ಕಳೆದುಕೊಂಡಿತು. ಇದ್ರಿಂದಾಗಿ ಕೋಟ್ಯಾಂತರ ಭಾರತೀಯರಿಗೆ ಭಾರೀ ನಿರಾಸೆಯಾಯ್ತು. ಹೀಗಾಗಿ ವಿಜ್ಞಾನಿಗಳು ಅದರ ಸಂಪರ್ಕಕ್ಕೆ ಸತತ ಪ್ರಯತ್ನ ನಡೆಸಿದ್ದು, ವಿಕ್ರಮ್ ಸುಸ್ಥಿತಿಯಲ್ಲಿದೆ ಅನ್ನೋದು ತಿಳಿದಿದ್ದು ಮತ್ತಷ್ಟು ವಿಶ್ವಾಸ ಮೂಡಿಸಿದೆ.




Leave a Reply

Your email address will not be published. Required fields are marked *

error: Content is protected !!