ಲೂಸಿಯಾ ಬ್ಯೂಟಿಗೆ ಹುಟ್ಟು ಹಬ್ಬದ ಸಂಭ್ರಮ

228

ಪ್ರಜಾಸ್ತ್ರ ಸಿನಿಮಾ ಡೆಸ್ಕ್

ನಟಿ ಶ್ರುತಿ ಹರಿಹರನ್ ಗೆ ಮಂಗಳವಾರ ಹುಟ್ಟು ಹಬ್ಬದ ಸಂಭ್ರಮ. 32ನೇ ವರ್ಷಕ್ಕೆ ಕಾಲಿಟ್ಟ ನಟಿಗೆ ಸಿನಿ ದುನಿಯಾದ ಮಂದಿ ಹಾಗೂ ಅವರ ಅಭಿಮಾನಿಗಳು ಶುಭ ಕೋರುತ್ತಿದದ್ದಾರೆ. ಮಲಯಾಳಂನ ಸಿನಿಮಾ ಕಂಪನಿ ಅನ್ನೋ ಚಿತ್ರದ ಮೂಲಕ 2012ರಲ್ಲಿ ಸಿನಿ ಪಯಣ ಶುರು ಮಾಡಿದ್ರು.

2013ರಲ್ಲಿ ಕನ್ನಡದಲ್ಲಿ ಲೂಸಿಯಾ ಚಿತ್ರದೊಂದಿಗೆ ಎಂಟ್ರಿ ಕೊಟ್ಟರು. ಬಳಿಕ ಇದಾದ್ಮೇಲೆ ಒಂದರೊಂತೆ ಸ್ಟಾರ್ ನಟಿಯರ ಜೊತೆಗೆ ಸ್ಕ್ರೀನ್ ಶೇರ್ ಮಾಡಿದ್ರು. ಕಿಚ್ಚ ಸುದೀಪ ಜೊತೆಗೆ ಅಂಬಿ ನಿಂಗೆ ವಯಸ್ಸಾಯಿತೋ, ಡಿ ಬಾಸ್ ದರ್ಶನ ಜೊತೆಗೆ ತಾರಕ, ಬ್ಯೂಟಿಫುಲ್ ಮನಸ್ಸುಗಳು, ನಾತಿಚರಾಮಿ, ಊರ್ವಿ, ಮನೆ ಮಾರಾಟಕ್ಕಿದೆ, ಆದ್ಯ, ರ್ಯಾಂಬೋ-2 ಸೇರಿದಂತೆ ಹತ್ತಾರು ಕನ್ನಡ ಚಿತ್ರಗಳಲ್ಲಿ ನಟಿಸಿದ್ದಾರೆ.

ಇನ್ನು ಹಿಂದಿ, ತಮಿಳು, ತೆಲುಗು ಚಿತ್ರಗಳಲ್ಲಿಯೂ ಸಹ ಶ್ರುತಿ ಹರಿಹರನ್ ಕಾಣಿಸಿಕೊಂಡಿದ್ದಾರೆ. ಇದರ ಜೊತೆಗೆ ಮೀ ಟೂ ಅಭಿಯಾನ ನಡೆದ ಸಂದರ್ಭದಲ್ಲಿ ಸೌಥ್ ಇಂಡಿಯಾದ ಖ್ಯಾತ ನಟ ಅರ್ಜು ಸರ್ಜಾ ಅವರ ಜೊತೆಗೆ ಒಂದಿಷ್ಟು ವಿವಾದ ನಡೆಯಿತು. ಅದು ಕೋರ್ಟ್ ಮೆಟ್ಟಿಲು ಸಹ ಏರಿತು.




Leave a Reply

Your email address will not be published. Required fields are marked *

error: Content is protected !!