ಚಿಕ್ಕ ಸಿಂದಗಿಯಲ್ಲಿ ಮತದಾನ

227

ಪ್ರಜಾಸ್ತ್ರ ಸುದ್ದಿ

ಸಿಂದಗಿ: ತಾಲೂಕಿನ ಬಂದಾಳ ಗ್ರಾಮ ಪಂಚಾಯ್ತಿ ವ್ಯಾಪ್ತಿಗೆ ಬರುವ ಚಿಕ್ಕ ಸಿಂದಗಿ ಗ್ರಾಮದ 3 ವಾರ್ಡ್ ಗಳ 7 ಸ್ಥಾನಗಳಿಗೆ ಇಂದು ಮತದಾನ ನಡೆಯುತ್ತಿದೆ. ಗ್ರಾಮದ ಪ್ರಾಥಮಿಕ ಶಾಲೆಯಲ್ಲಿ 3 ಕೇಂದ್ರಗಳನ್ನು ತೆರಯಲಾಗಿದ್ದು, ಚಳಿಯಿಂದಾಗಿ ಮತದಾರರು ಈಗ ಮತಕೇಂದ್ರಗಳತ್ತ ಬರುತ್ತಿದ್ದಾರೆ.

ಬೂತ್ ನಲ್ಲಿ ಸಕಲ ಪೊಲೀಸ್ ಭದ್ರತೆಯ ಜೊತೆಗೆ ಕೋವಿಡ್ ಮಾರ್ಗಸೂಚಿಗಳನ್ನು ಅನುಸರಿಸಲಾಗುತ್ತಿದೆ. ಇಲ್ಲಿ ಒಟ್ಟು 3 ವಾರ್ಡ್ ಗಳಿಗೆ 8 ಸ್ಥಾನಗಳಿದ್ದು 1 ಸ್ಥಾನ ಅವಿರೋಧ ಆಯ್ಕೆ ಆಗಿರುವುದರಿಂದ 7 ಸ್ಥಾನಗಳಿಗೆ ಇಂದು ಮತದಾನ ನಡೆಯುತ್ತಿದೆ. ಡಿಸೆಂಬರ್ 30ರಂದು ಫಲಿತಾಂಶ ಪ್ರಕಟವಾಗಲಿದೆ.




Leave a Reply

Your email address will not be published. Required fields are marked *

error: Content is protected !!