ಪ್ರಜಾಸ್ತ್ರ ಸಿನಿಮಾ ಡೆಸ್ಕ್
ಬಾಲಿವುಟ್ ನಟಿ ಸನ್ನಿ ಲಿಯೋನಾ ವಿರುದ್ಧ ಉತ್ತರ ಪ್ರದೇಶದ ಮಥುರಾ ಅರ್ಚಕರು ಸಿಟ್ಟಾಗಿದ್ದಾರೆ. ಯಾಕಂದರೆ, ಸನ್ನಿಯ ಇತ್ತೀಚೆಗೆ ಬಿಡುಗಡೆಯಾದ ಆಲ್ಬಂ ಸಾಂಗ್ ನಲ್ಲಿ ಧಾರ್ಮಿಕ ಭಾವನೆಗಳಿಗೆ ದಕ್ಕೆ ತಂದಿದ್ದಾರೆ ಎಂದು ಆರೋಪಿಸಿದ್ದಾರೆ.
ಮಧುಬನ ಮೇ ರಾಧಿಕಾ ನಾಚೇ ಅನ್ನೋ ಆಲ್ಬಂ ಸಾಂಗ್ ನಲ್ಲಿ ನಟಿ ಸನ್ನಿ ಲಿಯೋನಾ ಅಶ್ಲೀಲವಾಗಿ ಡ್ಯಾನ್ಸ್ ಮಾಡಿದ್ದಾರೆ ಅನ್ನೋದು ಅರ್ಚಕರ ಆರೋಪ. ಅವರು ಈ ವಿಡಿಯೋವನ್ನು ತೆಗೆದು ಹಾಕಬೇಕು. ಇಲ್ಲದಿದ್ದರೆ ನಾವು ಕೋರ್ಟ್ ಮೊರೆ ಹೋಗುತ್ತೇವೆ ಎಂದು ಹೇಳಿದ್ದಾರೆ. ಅಲ್ದೇ, ನಟಿ ಸನ್ನಿ ಲಿಯೋನಾ ಕ್ಷಮೆ ಕೇಳಬೇಕು ಎಂದಿದ್ದಾರೆ.