ಹಲೋ ಸನ್ನಿ ಲಿಯೋನ್.. ಕಾಲ್ ಮಾಡ್ಬೇಡಿ ನಾನು ಸನ್ನಿ ಅಲ್ಲ

566

ಇದೊಂದು ವಿಚಿತ್ರ ಪ್ರಕರಣವಾದ್ರೂ ದೆಹಲಿ ಮೂಲದ ಯುವಕನೊಬ್ಬ ಅನುಭವಿಸ್ತಿರುವ ಯಾತನೆ ಮಾತ್ರ ಭಯಂಕರವಾಗಿದೆ. ಸನ್ನಿ ಲಿಯೋನ್ ಅಭಿಮಾನಿಗಳ ಫೋನ್ ಕಾಲ್ ಗೆ ಪುನೀತ ಅಗರ್ವಾಲ ಅನ್ನೋ ಯುವಕ ಕಂಗಾಲಾಗಿದ್ದಾನೆ. ಇವನಿಗೆ ಕಾಲ್ ಮಾಡಿದವರೆಲ್ಲ ಸನ್ನಿ ಲಿಯೋನ್ ಗೆ ಫೋನ್ ಕೊಡಿ. ಮಾತ್ನಾಡಬೇಕು ಅಂತಿದ್ದಾರೆ. ಪುನೀತ ಇದು ಸನ್ನಿ ಲಿಯೋನ್ ನಂಬರ್ ಅಲ್ಲ ಅಂತಾ ಹೇಳಿ ಹೇಳಿ ಸಾಕಾಗಿ ಹೋಗಿದೆ.

ಈ ರೀತಿ ಹೇಳಿದ್ರೆ ನಿಮ್ಗೆ ಖಂಡಿತ ತಿಳಿಯುವುದಿಲ್ಲ. ಸ್ಟೋರಿ ಏನು ಅನ್ನೋದು ಇಲ್ಲಿದೆ. ಸನ್ನಿ ಲಿಯೋನ್ ನಟನೆಯ ಅರ್ಜುನ ಪಟಿಯಾಲಾ ಅನ್ನೋ ಸಿನಿಮಾ ಕಳೆದ ಶುಕ್ರವಾರ ರಿಲೀಸ್ ಆಗಿದೆ. ಈ ಸಿನಿಮಾದಲ್ಲಿ ನಟಿ ಸನ್ನಿ ಲಿಯೋನ್ ತನ್ನ ಫೋನ್ ನಂಬರ್ ಅಂತಾ ಹೇಳ್ತಾಳೆ. ಅದು ಆಕೆಯ ನಂಬರ್ ಎಂದುಕೊಂಡು ಅಭಿಮಾನಿಗಳು ಮಾಡ್ತಿದ್ದಾರೆ. ಅಸಲಿಗೂ ಅದು ದೆಹಲಿಯ ಪೀತಮಪುರದ ಪುನೀತ ಅಗರ್ವಾಲ ಅನ್ನೋ ಯುವಕನ ನಂಬರ್ ಆಗಿದೆ. ಅದು ಸನ್ನಿ ಲಿಯೋನ್ ನಂಬರ್ ಅಂದ್ಕೊಂಡು ನಿತ್ಯ ನೂರಾರು ಜನ ಫೋನ್ ಮಾಡಿ ಹಿಂಸೆ ಕೊಡ್ತಿದ್ದಾರೆ. ಇಲ್ಲಿಯವರೆಗೂ ಸುಮಾರು 500ಕ್ಕೂ ಹೆಚ್ಚು ಜನ ಕಾಲ್ ಮಾಡಿದ್ದಾರೆ. ಇದ್ರಿಂದ ಬೇಸತ ಪುನೀತ ಪೊಲೀಸ್ ಠಾಣೆ ಮೆಟ್ಟಿಲು ಹತ್ತಿದ್ದಾನೆ.

ಈ ಸಿನಿಮಾ ನಿರ್ದೇಶನ ಮಾಡಿದವನಿಗೆ ಬುದ್ದಿ ಇದೆಯೋ ಇಲ್ವೋ ಗೊತ್ತಿಲ್ಲ. ಒಬ್ಬರ ಫೋನ್ ನಂಬರ್ ಬಳಸುವ ಮೊದ್ಲು ಅವರ ಗಮನಕ್ಕೆ ತರಬೇಕು. ಒಂದು ವೇಳೆ ಬಳಿಸಿದ್ರೆ, ಅಲ್ಲಿ ಸೌಂಡ್ ಮ್ಯೂಟ್ ಮಾಡಬೇಕು ಅನ್ನೋ ಸಣ್ಣಪರಿಜ್ಞಾನ ಇಲ್ಲದೆ ಹೋಯ್ತು ಅನ್ನೋದು ದುರಂತ. ಸಿನಿಮಾ ಮಂದಿ ಮಾಡಿದ ಯಡವಟ್ಟಿಗೆ ಪುನೀತ ಅನ್ನೋ ಯುವಕ ಪಜೀತಿ ಅನುಭವಿಸ್ತಿದ್ದಾನೆ.




Leave a Reply

Your email address will not be published. Required fields are marked *

error: Content is protected !!