ಮಂಡ್ಯದಲ್ಲಿ‘ಸನ್ನಿ ಫ್ಯಾನ್ಸ್’ಗೆ ಚಿಕನ್ ಆಫರ್

377

ಪ್ರಜಾಸ್ತ್ರ ಸುದ್ದಿ

ಮಂಡ್ಯ: ಕೆಲವೊಮ್ಮೆ ಸಾಕಷ್ಟು ಸ್ವಾರಸ್ಯಕರ ಘಟನೆಗಳು ನಡೆಯುತ್ತವೆ. ಸಿನಿಮಾ ನಟ, ನಟಿಯರಿಗಾಗಿ ಅಭಿಮಾನಿಗಳು ಏನು ಬೇಕಾದರು ಮಾಡಲು ರೆಡಿ ಇರುತ್ತಾರೆ. ಇಲ್ಲೊಬ್ಬ ಬಾಲಿವುಡ್ ನಟಿ ಸನ್ನಿ ಲಿಯೋನ್ ಅಭಿಮಾನಿಗಳಿಗೆ ಬಿಗ್ ಆಫರ್ ಇಟ್ಟಿದ್ದಾನೆ.

ಮಂಡ್ಯದಲ್ಲಿರುವ ಡಿ.ಕೆ ಚಿಕನ್ ಸೆಂಟರ್ ನಲ್ಲಿ ಸಲ್ಲಿ ಲಿಯೋನ್ ಅಭಿಮಾನಿಗಳಿಗೆ ಶೇಕಡ 10ರಷ್ಟು ಡಿಸ್ಕೌಂಟ್ ಕೊಡಲಾಗುತ್ತಿದೆ. ಆದರೆ, ಮೂರು ಕಂಡಿಷನ್ ಗಳನ್ನು ಹಾಕಲಾಗಿದೆ. ಆ ಷರತ್ತುಗಳು ಏನು ಅನ್ನೋದು ಇಲ್ಲಿದೆ ನೋಡಿ.

ನಿಮ್ಮ ಮೊಬೈಲ್ ನಲ್ಲಿ ಸನ್ನಿ ಲಿಯೋನ್ 10 ಫೋಟೋಗಳಿರಬೇಕು.

ಸನ್ನಿ ಲಿಯೋನ್ ಫೇಸ್ ಬುಕ್ ಮತ್ತು ಇನ್ಸ್ಟಾ ಪೇಜ್ ಗಳನ್ನು ಫಾಲೋ ಮಾಡುತ್ತೀರಬೇಕು.

ಸನ್ನಿ ಲಿಯೋನ್ ಅವರ ಎಲ್ಲ ಫೋಟೋಗಳಿಗೂ ಲೈಕ್ ಮತ್ತು ಕಾಮೆಂಟ್ ಮಾಡುತ್ತಿರಬೇಕು.

ಈ ಮೂರು ಷರತ್ತುಗಳನ್ನು ನೀವು ಪೂರೈಯಿಸಿದರೆ, ನಿಮಗೆ ಶೇಕಡ 10ರಷ್ಟು ಕಡಿಮೆ ದರದಲ್ಲಿ ಚಿಕನ್ ಸಿಗಲಿದೆ.




Leave a Reply

Your email address will not be published. Required fields are marked *

error: Content is protected !!