ಅಳ್ನಾವರದಲ್ಲಿ ಜೈ ಹನುಮಾನ ದೇಗುಲ ಉದ್ಘಾಟನೆ

191

ಪ್ರಜಾಸ್ತ್ರ ಸುದ್ದಿ

ಅಳ್ನಾವರ: ಪಟ್ಟಣದಲ್ಲಿ ಸುಮಾರು 35ರಿಂದ 40 ವರ್ಷಗಳಿಂದ ಸಣ್ಣದಾದ ಹನುಮಾನ ದೇಗುಲವಿತ್ತು. ಇಲ್ಲಿನ ಜನರು ದೊಡ್ಡದಾದ ದೇವಸ್ಥಾನ ನಿರ್ಮಿಸಬೇಕು ಅನ್ನೋದು ಆಗಿತ್ತು. ಅವರೆಲ್ಲರ ಕನಸು ಇದೀಗ ನನಸಾಗಿದೆ. ಪಟ್ಟಣದ ನೆಹರು ನಗರದಲ್ಲಿ ಸುಂದರವಾದ ಭಜರಂಗಿ ದೇಗುಲ ಸಿದ್ಧವಾಗಿದೆ.

ಸುಮಾರು 50 ಲಕ್ಷ ರೂಪಾಯಿ ಎಚ್ಚದಲ್ಲಿ ಬೃಹತ್ ಮಂದಿರ ನಿರ್ಮಾಣವಾಗಿದೆ. 100ಕ್ಕೂ ಹೆಚ್ಚು ಕಾರ್ಮಿಕರು ಇದನ್ನು ನಿರ್ಮಿಸಿದ್ದಾರೆ. ಅಲ್ದೇ, ಅವರು ಸಹ ದೇಣಿಗೆ ನೀಡಿದ್ದಾರೆ. ಸುಮಾರು 40 ವರ್ಷಗಳ ಹಿಂದೆ ಚಿಕ್ಕ ಮೂರ್ತಿಯನ್ನು ಪ್ರತಿಷ್ಠಾಪಿಸಿ ಪೂಜೆ ಮಾಡಿಕೊಂಡು ಬರಲಾಗುತಿತ್ತು. ಇದೀಗ ಎಲ್ಲರ ಕಣ್ಮನ ಸೆಳೆಯುವಂತಹ ದೇವಸ್ಥಾನ ತಲೆ ಎತ್ತಿದೆ. ಏಪ್ರಿಲ್ 15ರಿಂದ 17ರ ತನಕ ಉದ್ಘಾಟನಾ ಕಾರ್ಯಕ್ರಮಗಳು ನಡೆಯಲಿವೆ.

ಶನಿವಾರ ಹನುಮ ಜಯಂತಿ ಇದೆ. ಈ ಶುಭ ಸಂದರ್ಭದಲ್ಲಿ ಪ್ರಾಣಪ್ರತಿಷ್ಠಾಪನಾ ಕಾರ್ಯಕ್ರಮ ಸಹ ಜರುಗಲಿದೆ. ಕಾರ್ಯಕ್ರಮಕ್ಕೆ ಮಂಜುನಾಥ ಭಾರತಿ ಸ್ವಾಮಿಗಳು, ಗೋಸಾಯಿ ಮಠ ಗವೀಪುರಂ, ಬೆಂಗಳೂರು ಹಾಗೂ ಪ್ರಭು ನೀಲಕಂಠ ಮಹಾಸ್ವಾಮಿಗಳು, ಮುರುಸಾವಿರ ಮಠ, ಬೈಲಹೊಂಗಲ ಇವರುಗಳು ಸಾನಿಧ್ಯ ವಹಿಸಲಿದ್ದಾರೆ. ಮೂರು ದಿನಗಳ ಕಾರ್ಯಕ್ರಮದಲ್ಲಿ ವಿಶೇಷ ಪೂಜೆ, ಕುಂಭಮೇಳ, ಹೋಮ-ಹವನ ಸೇರಿದಂತೆ ಸಾಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ.




Leave a Reply

Your email address will not be published. Required fields are marked *

error: Content is protected !!