41 ಲಕ್ಷಕ್ಕೂ ಅಧಿಕ ಜನರ ಟೆಸ್ಟ್: 5 ಲಕ್ಷ ದಾಟಿದ ಸೋಂಕಿತರು

234

ಪ್ರಜಾಸ್ತ್ರ ಸುದ್ದಿ

ಬೆಂಗಳೂರು: ರಾಜ್ಯದಲ್ಲಿ ಕಳೆದ 24 ಗಂಟೆಯಲ್ಲಿ 8,364 ಜನರಲ್ಲಿ ಕೋವಿಡ್ 19 ಸೋಂಕು ಕಾಣಿಸಿಕೊಂಡಿದೆ. ಇದರೊಂದಿಗೆ 5,11,346ಕ್ಕೆ ಏರಿಕೆಯಾಗಿದೆ. ಹೀಗಾಗಿ ರಾಜ್ಯದಲ್ಲಿ 5 ಲಕ್ಷಕ್ಕೂ ಅಧಿಕ ಜನರಲ್ಲಿ ಕರೋನಾ ಕಾಣಿಸಿಕೊಂಡಿದೆ. ಇನ್ನು ರ್ಯಾಪಿಡ್ ಟೆಸ್ಟ್, ಆರ್ ಟಿ ಪಿಸಿಆರ್ ಹಾಗೂ ಇತರೆ ಟೆಸ್ಟ್ ಗಳ ಮೂಲಕ ಇದುವರೆಗೂ 41,79,567 ಜನರಿಗೆ ಪರೀಕ್ಷೆ ನಡೆಸಲಾಗಿದೆ.

ಇಂದು 10,815 ಜನರು ಡಿಸ್ಚಾರ್ಜ್ ಆಗಿದ್ದು, 404841 ಜನರು ಇದುವರೆಗೂ ಗುಣಮುಖರಾಗಿದ್ದಾರೆ. ಇಂದು 114 ಜನರು ಸಾವನ್ನಪ್ಪಿದ್ದು, 7,922ಕ್ಕೆ ಮೃತರ ಸಂಖ್ಯೆ ಏರಿಕೆಯಾಗಿದೆ. 822 ಜನರು ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಜಿಲ್ಲಾವಾರು ಸೋಂಕಿತರ ವಿವರ ಇಲ್ಲಿದೆ..

ಬಾಗಲಕೋಟೆ 152, ಬಳ್ಳಾರಿ 300, ಬೆಳಗಾವಿ 100, ಬೆಂ. ಗ್ರಾ 189, ಬೆಂ.ನ 3,733, ಬೀದರ 23, ಚಾಮರಾಜನಗರ 72, ಚಿಕ್ಕಬಳ್ಳಾಪುರ 89, ಚಿಕ್ಕಮಗಳೂರು 165, ಚಿತ್ರದುರ್ಗ 83, ದ.ಕ 432, ದಾವಣಗೆರೆ 163, ಧಾರವಾಡ 264, ಗದಗ 391, ಹಾಸನ 19, ಹಾವೇರಿ 107, ಕಲಬುರಗಿ 110, ಕೊಡಗು 38, ಕೋಲಾರ 91, ಕೊಪ್ಪಳ 96, ಮಂಡ್ಯ 94, ಮೈಸೂರು 626, ರಾಯಚೂರು 156, ರಾಮನಗರ 47, ಶಿವಮೊಗ್ಗ 106, ತುಮಕೂರು 159, ಉಡುಪಿ 215, ಉ.ಕ 129, ವಿಜಯಪುರ 87, ಯಾದಗಿರಿ 127 ಜನರಲ್ಲಿ ಸೋಂಕು ಪತ್ತೆಯಾಗಿದೆ.




Leave a Reply

Your email address will not be published. Required fields are marked *

error: Content is protected !!