ಐಪಿಎಲ್ ಫಸ್ಟ್ ಮ್ಯಾಚ್: ಸಿಎಸ್ಕೆ ಶುಭಾರಂಭ

290

ಪ್ರಜಾಸ್ತ್ರ ಕ್ರೀಡಾ ಸುದ್ದಿ

ದುಬೈ: ಯುಎಇನ ಶೇಖ್ ಯಾಝಿದ್ ಸ್ಟೇಡಿಯಂನಲ್ಲಿ ನಡೆದ ಐಪಿಎಲ್ ಟೂರ್ನಿಯ ಮೊದಲ ಪಂದ್ಯದಲ್ಲಿ ಧೋನಿ ಬಳಗ ಗೆಲುವು ದಾಖಲಿಸಿದೆ. ಈ ಮೂಲಕ ಚೆನ್ನೈ ಸೂಪರ್ ಕಿಂಗ್ಸ್ ಶುಭಾರಂಭ ಮಾಡಿದೆ

ಟಾಸ್ ಗೆದ್ದ ಚೆನ್ನೈ ಸೂಪರ್ ಕಿಂಗ್ಸ್ ಫೀಲ್ಡ್ ಆಯ್ಕೆ ಮಾಡಿಕೊಂಡಿತು. ಹೀಗಾಗಿ ಮೊದಲು ಬ್ಯಾಟ್ ಮಾಡಿದ ಮುಂಬೈ ಇಂಡಿಯನ್ಸ್ 20ಓವರ್ ನಲ್ಲಿ 9 ವಿಕೆಟ್ ಕಳೆದುಕೊಂಡು 162ರನ್ ಬಾರಿಸಿ 163 ಟಾರ್ಗೆಟ್ ನೀಡಿತು.

ಮುಂಬೈ ಪರ ರೋಹಿತ ಶರ್ಮಾ 12, ಡಿ ಕಾಕ್ 33, ಯಾದವ 17, ತಿವಾರಿ 42, ಹಾರ್ದಿಕ್ ಪಾಂಡೆ 14, ಪೊಲಾರ್ಡ್ 18, ಕರ್ನಲ್ ಪಾಂಡೆ 03, ಪೀಟರ್ಸನ್ 11, ಆರ್.ಚಾಹರ್ 02, ಬೊಲ್ಟ್ 0, ಬೂಮ್ರಾ 05 ರನ್ ಬಾರಿಸಿದ್ರು. ಸಿಎಸ್ಕೆ ಪರ ಡಿ.ಚಾಹರ್ 2, ಕುರಾನ್ 1, ಲುಂಗಿಡಿ 3, ಚವ್ಲಾ 1, ಜಡೇಜಾ 2ವಿಕೆಟ್ ಪಡೆದ್ರು.

ಮುಂಬೈ ನೀಡಿದ ಸ್ಕೋರ್ ಬೆನ್ನು ಹತ್ತಿದ ಸಿಎಸ್ಕೆ ಆರಂಭಿಕ ಆಘಾತವಾಯ್ತು. ಹೀಗಾಗಿ 6 ರನ್ ಗಳಿಗೆ ಶೇನ್ ವಾಟ್ಸನ್, ಮುರಳಿ ವಿಜಯ ವಿಕೆಟ್ ಕಳೆದುಕೊಂಡಿತು. ಬಳಿಕ ಬಂದ ಅಂಬಾಟಿ ರಾಯ್ಡು ಹಾಗೂ ಡುಪ್ಲ್ ಸಿ 115 ರನ್ ಗಳ ಜೊತೆಯಾಟವಾಡಿದ್ರು. ಇದರಲ್ಲಿ ಅಂಬಾಟಿ ರಾಯ್ಡು 71ರನ್ ಬಾರಿಸಿ ಔಟ್ ಆದ. ಬಳಿಕ ಬಂದ ಜಡೇಜಾ 10, ಕರನ್ 18 ರನ್ ಬಾರಿಸಿ ಔಟ್ ಆದ್ರು. ಬಳಿಕ ಕ್ಯಾಪ್ಟನ್ ಧೋನಿ ಬಂದ್ರು. ಕೊನೆತನಕ ಉಳಿದ ಡುಪ್ಲ್ ಸಿಸ್ 58ರನ್ ಬಾರಿಸಿ ಗೆಲುವು ತಂದುಕೊಟ್ರು. 166ರನ್ ಬಾರಿಸಿ ಸಿಎಸ್ಕೆ ಗೆಲುವು ದಾಖಲಿಸಿತು.

ಮುಂಬೈ ಪರ ಬೊಲ್ಟ್ 1, ಪಟಿಸನ್ 1, ಬೂಮ್ರಾ 1, ಪಾಂಡೆ 1, ಚಾಹರ್ 1 ವಿಕೆಟ್ ಪಡೆದ್ರು.




Leave a Reply

Your email address will not be published. Required fields are marked *

error: Content is protected !!