ಈಶ್ವರಪ್ಪಗೆ ಜೈಲು ಫಿಕ್ಸ್?

191

ಪ್ರಜಾಸ್ತ್ರ ಸುದ್ದಿ

ಬೆಂಗಳೂರು: ಸಚಿವ ಕೆ.ಎಸ್ ಈಶ್ವರಪ್ಪ ವಿರುದ್ಧ ಶೇಕಡ 40ರಷ್ಟು ಕಮಿಷನ್ ಕೇಳಿದ್ದಾರೆ ಅನ್ನೋ ಗಂಭೀರ ಆರೋಪವನ್ನು ಗುತ್ತಿಗೆದಾರ ಸಂತೋಷ್ ಪಾಟೀಲ್ ಮಾಡಿದ್ದ. ಕೊನೆಗೆ ಆತ ಆತ್ಮಹತ್ಯೆ ಸಹ ಮಾಡಿಕೊಂಡ. ಅದು ಈಶ್ವರಪ್ಪಗೆ ಉರುಳಾಗಿದ್ದು, ನಾಳೆ ಸಿಎಂಗೆ ರಾಜೀನಾಮೆ ಸಲ್ಲಿಸುವುದಾಗಿ ಘೋಷಿಸಿದ್ದಾರೆ.

ಇನ್ನು ಈಶ್ವರಪ್ಪರಗೆ ಜೈಲು ಫಿಕ್ಸ್ ಎಂದು ಹೇಳಲಾಗುತ್ತಿದೆ. ರಾಜ್ಯ ನಾಯಕರು ಹಾಗೂ ಕೇಂದ್ರ ನಾಯಕರೊಂದಿಗೆ ಉತ್ತಮ ಸಂಬಂಧ ಇಟ್ಟುಕೊಂಡಿಲ್ಲ. ಮೇಲಾಗಿ ಪದೆಪದೆ ಪಕ್ಷಕ್ಕೆ ಡ್ಯಾಮೇಜ್ ಆಗುವ ರೀತಿಯಲ್ಲಿ ಹೇಳಿಕೆಗಳನ್ನು ಕೊಡುತ್ತಾ ಬರುತ್ತಿದ್ದಾರೆ. ಹೀಗಾಗಿ ಪಕ್ಷದೊಳಗಿನ ಹಿರಿಯ ನಾಯಕರಿಗೂ ಇವರ ಬಗ್ಗೆ ಅಷ್ಟಕ್ಕೆ ಅಷ್ಟೇ ಅನ್ನೋ ಮಾತಿದೆ.

ಸಂತೋಷ್ ಪಾಟೀಲ್ ಆತ್ಮಹತ್ಯೆ ಕೇಸ್ ಜೊತೆಗೆ, ಭ್ರಷ್ಟಾಚಾರದ ಆರೋಪದ ಕೇಸ್ ಆಗಿರಬಹುದು, ಈ ಹಿಂದೆ ರಾಷ್ಟ್ರಧ್ವಜ ಬದಲಾವಣೆ ಆಗಬಹುದು ಅನ್ನೋ ಹೇಳಿಕೆ ಕೊಟ್ಟಿರುವುದು ಇರಬಹುದು. ಶಿವಮೊಗ್ಗದಲ್ಲಿ ನಡೆದ ಗಲಭೆ ಕಾರಣ ಇರಬಹುದು. ಹೀಗೆ ಹಲವು ವಿಚಾರಗಳಲ್ಲಿ ಈಶ್ವರಪ್ಪ ಪಕ್ಷಕ್ಕೆ, ಸರ್ಕಾರಕ್ಕೆ ಮುಜುಗರ ತಂದಿದ್ದಾರೆ ಎಂದು ಸ್ವಪಕ್ಷೀಯದವರೆ ಕೆಂಡಾಮಂಡಲರಾಗಿದ್ದಾರಂತೆ. ಹೀಗಾಗಿ ಸಂತೋಷ್ ಪ್ರಕರಣದ ಸೂಕ್ತ ತನಿಖೆ ನಡೆದು ಆರೋಪ ಸಾಬೀತಾದರೆ ಈಶ್ವರಪ್ಪ ಜೈಲು ಫಿಕ್ಸ್ ಎಂದು ಹೇಳಲಾಗುತ್ತಿದೆ.




Leave a Reply

Your email address will not be published. Required fields are marked *

error: Content is protected !!